ನವದೆಹಲಿ : ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ ಬುಕ್ ಬಳಿಕ ಜಾಗತಿಕ ಮಟ್ಟದ ತಂತ್ರಜ್ಞಾನ ಸಂಸ್ಥೆ ಸಿಲ್ವರ್ ಲೇಕ್ ಜಿಯೊ ಮೊಬೈಲ್ ಡಿಜಿಟಲ್ ಕಂಪೆನಿಯಲ್ಲಿ ಹೂಡಿಕೆ ಮಾಡಲಿದೆ. ಸಿಲ್ವರ್ ಲೇಕ್ ಹೂಡಿಕೆ ಮಾಡುವ ಮೊತ್ತ 5 ಸಾವಿರದ 655 .75 ಕೋಟಿ ರೂಪಾಯಿಗಳು.
ಜಿಯೊ ಕಂಪೆನಿಯಲ್ಲಿ ಸಿಲ್ವರ್ ಲೇಕ್ ಹೂಡಿಕೆ ಮಾಡುವ ಮೊತ್ತದ ಷೇರು ಬೆಲೆ 4.90 ಲಕ್ಷ ಕೋಟಿ ರೂಪಾಯಿ ಮತ್ತು ಉದ್ಯಮ ಮೊತ್ತ 5.15 ಲಕ್ಷ ಕೋಟಿ ರೂಪಾಯಿಗಳು. ಕಳೆದ ತಿಂಗಳು ಫೇಸ್ ಬುಕ್ ಮಾಡಿರುವ ಷೇರು ಹೂಡಿಕೆ ಮೊತ್ತದ ಶೇಕಡಾ 12.5ರಷ್ಟಾಗಲಿದೆ.
ಸಿಲ್ವರ್ ಲೇಕ್ ಕಂಪೆನಿಯ ಹೂಡಿಕೆ ಬಗ್ಗೆ ಮಾಹಿತಿ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ, ಭಾರತದ ಡಿಜಿಟಲ್ ಕ್ಷೇತ್ರದ ಬೆಳವಣಿಗೆಗೆ ನಮ್ಮ ಸಹಭಾಗಿಯಾಗಿ ಸಿಲ್ವರ್ ಲೇಕ್ ಕಂಪೆನಿ ಕೈಜೋಡಿಸುತ್ತಿರುವುದು ಸಂತಸ ತಂದಿದೆ.ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಕಂಪೆನಿ ಸಿಲ್ವರ್ ಲೇಕ್ ಹಣಕಾಸು ಮತ್ತು ತಂತ್ರಜ್ಞಾನ ವಿಷಯದಲ್ಲಿ ಗುರುತಿಸಿಕೊಂಡಿದೆ. ಆ ಕಂಪೆನಿಯ ತಾಂತ್ರಿಕ ಜ್ಞಾನವನ್ನು ಬಳಸಿಕೊಂಡು ಭಾರತದ ಡಿಜಿಟಲ್ ಲೋಕದ ಸುಧಾರಣೆ ಮತ್ತು ರೂಪಾಂತರಕ್ಕೆ ಪ್ರಯತ್ನಿಸಲಾಗುವುದು ಎಂದರು.
ಸಿಲ್ವರ್ ಲೇಕ್ ಸಿಇಒ ಮತ್ತು ವ್ಯವಸ್ಥಾಪಕ ಸಹಭಾಗಿತ್ವ ಎಗೊನ್ ದುರ್ಬನ್, ಜಿಯೊ ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪೆನಿ. ಬಲವಾದ ಮತ್ತು ಉದ್ಯಮಶೀಲ ನಿರ್ವಹಣಾ ತಂಡವನ್ನು ಹೊಂದಿದೆ. ಕಡಿಮೆ ವೆಚ್ಚದ ಡಿಜಿಟಲ್ ಸೇವೆಗಳ ಶಕ್ತಿಯನ್ನು ಗ್ರಾಹಕ ಮತ್ತು ಜನಸಾಮಾನ್ಯರಿಗೆ ಸಿಗುವಂತೆ ಮಾಡುವ ಅಸಾಧಾರಣ ಎಂಜಿನಿಯರಿಂಗ್ ಸಾಮರ್ಥ್ಯ ಹೊಂದಿದೆ. ಅವರ ಮಾರುಕಟ್ಟೆ ವಿಸ್ತಾರ ತಂತ್ರ ಕೂಡ ವಿಶಿಷ್ಟವಾಗಿದೆ. ಈ ಸಂದರ್ಭದಲ್ಲಿ ಜಿಯೊ ಕೈಜೋಡಿಸುತ್ತಿರುವುದು ನಮಗೆ ಸಂತಸ ವಿಷಯ ಎಂದಿದ್ದಾರೆ.
ಇದಕ್ಕೂ ಮುನ್ನ ಫೇಸ್ ಬುಕ್ ಜಿಯೊ ಕಂಪೆನಿಯಲ್ಲಿ 43 ಸಾವಿರದ 574 ಕೋಟಿ ರೂಪಾಯಿ ಅಂದರೆ ಶೇಕಡಾ 9.99ರ ಷೇರುಗಳಷ್ಟು ಹೂಡಿಕೆ ಮಾಡಿತ್ತು.
Follow us on Social media