ದುಬೈ : ಗುರುವಾರ ನಡೆದ ಫೆಡ್ ಕಪ್ ಏಷ್ಯಾ / ಓಷಿಯಾನಿಯಾ ವಲಯ ಗುಂಪು ಪಂದ್ಯದಲ್ಲಿ ಸ್ಟಾರ್ ಆಟಗಾರ್ತಿಯರಾದ ಸಾನಿಯಾ ಮಿರ್ಜಾ ಮತ್ತು ಅಂಕಿತಾ ರೈನಾ ಅವರ ಅದ್ಭುತ ಪ್ರದರ್ಶನದ ಫಲವಾಗಿ ಭಾರತ 2–1ರಿಂದ ಕೊರಿಯಾವನ್ನು ಸೋಲಿಸಿತು.
ಭಾರತವು ಮೊದಲ ಪಂದ್ಯದಲ್ಲಿ ಚೀನಾ ವಿರುದ್ಧ 0–3ರಿಂದ ಸೋಲನ್ನು ಅನುಭವಿಸಿತು. ಎರಡನೇ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ಅನ್ನು 3–0 ಮತ್ತು ಕೊರಿಯಾವನ್ನು 2–1ರಿಂದ ಸೋಲಿಸಲು ಅದ್ಭುತ ಪುನರಾಗಮನವನ್ನು ಮಾಡಿತು. ಎಲ್ಲಾ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಚೀನಾ ಅಗ್ರಸ್ಥಾನದಲ್ಲಿದೆ.
ಭಾರತ ಮುಂದಿನ ಪಂದ್ಯದಲ್ಲಿ ಚೀನಾದ ತೈಪೆ ಮತ್ತು ಇಂಡೋನೇಷ್ಯಾ ವಿರುದ್ಧ ಆಡಲಿದೆ. ಏಪ್ರಿಲ್ 17-18ರಂದು ನಡೆಯಲಿರುವ ಈ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಅಗ್ರ ಎರಡು ತಂಡಗಳು ಪ್ಲೇ-ಆಫ್ನಲ್ಲಿ ಸ್ಥಾನ ಪಡೆಯಲಿವೆ.
ಮೊದಲ ಎರಡು ಸಿಂಗಲ್ಸ್ ನಲ್ಲಿ ಭಾರತ ಹಾಗೂ ಕೊರಿತಾ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದಿದ್ದವು. ವಿಶ್ವ ಡಬಲ್ಸ್ ಶ್ರೇಯಾಂಕದಲ್ಲಿ 222 ನೇ ಸ್ಥಾನದಲ್ಲಿರುವ ಸಾನಿಯಾ, ಪ್ರಸ್ತುತ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಪದಾರ್ಪಣೆ ಮಾಡಿದರು. ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಮತ್ತು 119 ನೇ ಶ್ರೇಯಾಂಕದ ಅಂಕಿತಾ ಜೋಡಿ 6-4, 6-4 ರಿಂದ ಕೊರಿಯಾದ ನಾ-ಲೀ ಹಾನ್, ನಾ ರಿ ಕಿಮ್ ಅವರನ್ನು ಸೋಲಿಸಿತು.
ಇದಕ್ಕೂ ಮೊದಲು, 433 ನೇ ಶ್ರೇಯಾಂಕದ ರುತುಜಾ ಭೋಸ್ಲೆ ಮೊದಲ ಸಿಂಗಲ್ಸ್ನಲ್ಲಿ ಸೂ ಜಿಯಾಂಗ್ ಜಾಂಗ್ಗಿಂತ 7-5, 6-4ರಲ್ಲಿ ವಿರುದ್ಧ ಗೆಲುವು ದಾಖಲಿಸಿದರು. ಆದರೆ ಎರಡನೇ ಪಂದ್ಯದಲ್ಲಿ 160 ನೇ ಸ್ಥಾನದಲ್ಲಿದ್ದ ಅಂಕಿತಾ ರೈನಾ 4-6, 0-6ರಲ್ಲಿ ನಾ-ಲೀ ಹಾನ್ ವಿರುದ್ಧ ಸೋತರು ಮತ್ತು ಸ್ಕೋರ್ 1-1ಕ್ಕೆ ಸಮನಾಗಿತ್ತು.
Source : UNI
Follow us on Social media