ಬೆಂಗಳೂರು : ಶಿರ್ವ ಚರ್ಚ್‌ನ ಸಹಾಯಕ ಧರ್ಮಗುರು ಫಾ.ಮಹೇಶ್ ಡಿಸೋಜಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿತನಾಗಿರುವ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾಗೆ ಹೈಕೊರ್ಟ್ ಷರತ್ತುಬದ್ದ ಜಾಮೀನು ನೀಡಿದೆ.
ಶಿರ್ವ ಚರ್ಚ್‌ನ ಸಹಾಯಕ ಧರ್ಮಗುರು ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆಗೆ ಡೇವಿಡ್ ಡಿಸೋಜಾ ಪ್ರಚೋದನೆ ನೀಡಿರುವ ಆರೋಪದಡಿ ಬಂಧಿಸಲಾಗಿತ್ತು.
ಡೇವಿಡ್ ಡಿಸೋಜಾನ ಪತ್ನಿ ಜೊತೆ ನಿರಂತರ ಫೋನ್ ಸಂಭಾಷಣೆ, ಮೊಬೈಲ್ ಚಾಟಿಂಗ್ ನಡೆಸುತ್ತಿದ್ದನ್ನು ಪತ್ನಿಯ ಮೊಬೈಲ್ ನೋಡಿ ತಿಳಿದ ಡೇವಿಡ್ ಫೋನ್‌ನಲ್ಲಿ ಫಾ.ಮಹೇಶ್ ರಿಗೆ ಬೆದರಿಕೆ ಹಾಕಿದ್ದ. ಇದು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ದೃಢಪಟ್ಟ ಆರೋಪದಡಿ ತನಿಖಾಧಿಕಾರಿ ಕಾಪು ವೃತ್ತ ನೀರಿಕ್ಷಕ ಮಹೇಶ ಪ್ರಸಾದ್ ಆರೋಪಿ ಡೇವಿಡ್ ಡಿಸೋಜಾನನ್ನು ಬಂಧಿಸಿದ್ದರು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಆರೋಪಿ ಪರ ಹೈಕೊರ್ಟ್ ನ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಮತ್ತು ರಕ್ಷಿತ್ ಕುಮಾರ್ ವಾದಿಸಿದ್ದರು.
Follow us on Social media