ಕೋಲ್ಕತ್ತ : ತೀವ್ರ ಕುತೂಹಲ ಮೂಡಿಸಿದ್ದ ಪಶ್ಚಿಮ ಬಂಗಾಳದ ನಂದಿಗ್ರಾಮ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಕೊನೆಗೊಂಡಿದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ 1200 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುವೆಂದು ಅಧಿಕಾರಿ ಹಾಗೂ ಪಶ್ಚಿಮ ಬಂಗಾಳ ಸಿಎಂ ದೀದಿ ನಡುವೆ ನಂದಿಗ್ರಾಮ ಕ್ಷೇತ್ರ ಚುನಾವಣೆಯಲ್ಲಿ ಭಾರೀ ಹಣಾಹಣಿ ನಡೆದಿದ್ದು, ಕೊನೆಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸ್ಥಾನವನ್ನು ದೀದಿ ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಕಾಲಿಗೆ ಏಟಾಗಿದ್ದ ಕಾರಣ ದೀದಿ ತನ್ನ ಉಳಿದ ಎಲ್ಲಾ ಪ್ರಚಾರವನ್ನು ವೀಲ್‌ಚೇರ್‌ನಲ್ಲಿಯೇ ಕುಳಿತು ಮಾಡಿದ್ದರು.
ದೀದಿಯ ಟಿಎಂಸಿ ಪಕ್ಷ ಭಾರೀ ಮುನ್ನಡೆ ಗಳಿಸಿದ್ದರೂ ಕೂಡಾ ಆರಂಭದಿಂದಲ್ಲೇ ದೀದಿಯು ಭಾರೀ ಹಿನ್ನೆಡೆ ಗಳಿಸಿರುವುದು ಟಿಎಂಸಿ ಪಕ್ಷದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಒಂದು ವೇಳೆ ಮಮತಾ ಬ್ಯಾನರ್ಜಿ ಸೋಲನ್ನಪ್ಪಿದರೆ ಬಂಗಾಳದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಯೂ ಕೂಡಾ ಮೂಡಿತ್ತು.
ಆದರೆ ತನ್ನ ಮುಖ್ಯಮಂತ್ರಿ ಗದ್ದುಗೆ ಉಳಿಸಿಕೊಂಡಿರುವ ದೀದಿ 1200 ಮತಗಳಿಂದ ಬಿಜೆಪಿಯ ಸುವೆಂದು ಅಧಿಕಾರಿಯನ್ನು ಸೋಲಿಸಿದ್ದಾರೆ. ಈ ಮೂಲಕ ಈ ಕ್ಷೇತ್ರದಲ್ಲಿ ಭಾರೀ ಪ್ರಚಾರ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರೀ ಮುಖಭಂಗವಾಗಿದೆ.
Follow us on Social media