ನವದೆಹಲಿ: ಭಾರತಿ ಏರ್ ಟೆಲ್ ಸಂಸ್ಥೆ ತನ್ನ ಪ್ಲಾಟಿನಮ್ ಗ್ರಾಹಕರಿಗೆ ಆದ್ಯತೆಯ 4 ಜಿ ನೆಟ್ವರ್ಕ್ ನ್ನು ಘೋಷಿಸಿದೆ.
ಏರ್ ಟೆಲ್ ನಲ್ಲಿ ಪ್ಲಾಟಿನಮ್ ಮೊಬೈಲ್ ಗ್ರಾಹಕರಿಗೆ ಆದ್ಯತೆಯ ನೆಟ್ವರ್ಕ್ ನ್ನು ನೀಡುವ ಆಧುನಿಕ ತಂತ್ರಜ್ಞಾನವನ್ನು ಏರ್ ಟೆಲ್ ಅಳವಡಿಸಿಕೊಂಡಿದೆ. ಪರಿಣಾಮವಾಗಿ ಎಲ್ಲಾ ಗ್ರಾಹಕರಿಗೂ 4ಜಿ ನೆಟ್ವರ್ಕ್ ನ ವೇಗ ಮತ್ತಷ್ಟು ವೇಗವಾಗಿ ಲಭ್ಯವಾಗಲಿದೆ.
ಏರ್ ಟೆಲ್ ಥ್ಯಾಂಕ್ಸ್ ಪ್ರೋಗ್ರಾಮ್ ನ ಅಡಿಯಲ್ಲಿ ಎಲ್ಲಾ ಪೋಸ್ಟ್ ಪೇಯ್ಡ್ ಗ್ರಾಹಕರಿಗೂ 499 ರೂಪಾಯಿ ಹಾಗೂ ಮೇಲ್ಪಟ್ಟ ಪ್ಲಾನ್ಸ್ ಪ್ಲ್ಯಾಟಿನಮ್ ವಿಭಾಗದಲ್ಲಿ ಗುರುತಿಸಲಾಗುತ್ತದೆ, ಏರ್ ಟೆಲ್ ಥ್ಯಾಂಕ್ಸ್ ಅಪ್ ನಲ್ಲಿ ಕಸ್ಟಮೈಸ್ಡ್ ಪ್ಲಾಟಿನಮ್ ಯುಐ ಸೇರಿದಂತೆ ಹಲವು ಎಕ್ಸ್ಲ್ಯೂಸೀವ್ ಸೌಲಭ್ಯಗಳು ದೊರೆಯಲಿವೆ.
ಪ್ಲಾಟಿನಮ್ ಗ್ರಾಹರಿಕರಿಗೆ ರೆಡ್ ಕಾರ್ಪೆಟ್ ಕಸ್ಟಮರ್ ಕೇರ್ ಲಭ್ಯವಿದ್ದು, ರಿಟೇಲ್ ಸ್ಟೋರ್ಸ್ ಅಥವಾ ಕಾಲ್ ಸೆಂಟರ್ ಗಳಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳದೇ ಸಮಸ್ಯೆಗಳಿಗೆ ಸಿಬ್ಬಂದಿಗಳು ಸ್ಪಂದಿಸಲಿದ್ದಾರೆ.
ಏರ್ ಟೆಲ್ ಥ್ಯಾಂಕ್ಸ್ ಪ್ರೋಗ್ರಾಮ್ ಅಡಿಯಲ್ಲಿ ಪ್ಲಾಟಿನಮ್ ಮೊಬೈಲ್ ಕಸ್ಟಮರ್ ಗಳಿಗೆ ವಿಶೇಷವಾದ ಸೌಲಭ್ಯ ಒದಗಿಸುವ ಪ್ರಯತ್ನ ಇದಾಗಿದ್ದು, ಆದ್ಯತೆಯ ಮೇರೆಗೆ 4 ಜಿ ನೆಟ್ವರ್ಕ್ ನ್ನು ನೀಡಲಾಗುತ್ತದೆ ಎಂದು ಭಾರ್ತಿ ಏರ್ಟೆಲ್ ನ ಸಿಎಂಒ ಶಾಶ್ವತ್ ಶರ್ಮಾ ಹೇಳಿದ್ದಾರೆ. ಏರ್ ಟೆಲ್ ನ ಚಾಲ್ತಿ ಗ್ರಾಹಕರು 499 ರೂಗಳ ಪೋಸ್ಟ್ ಪೇಯ್ಡ್ ಯೋಜನೆಗಳ ಮೂಲಕ ಪ್ಲಾಟಿನಮ್ ಗ್ರಾಹಕರಾಗಬಹುದಾಗಿದೆ.
Follow us on Social media