ವಾಷಿಂಗ್ಟನ್ : ತಮ್ಮ ಮಿಲಿಟರಿ ಸಹಾಯಕನಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ನಂತರ ಪ್ರತಿದಿನ ತಾವು ಕೂಡ ಕೊರೋನಾ ಪರೀಕ್ಷೆಗೆ ಒಳಪಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಖಾಸಗಿ ಭದ್ರತಾ ಸಹಾಯಕನಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು ಆತನೊಂದಿಗೆ ಅಧ್ಯಕ್ಷರು ತೀರಾ ಹತ್ತಿರದ ಸಂಪರ್ಕ ಹೊಂದಿರಲಿಲ್ಲ ಎಂದು ತಿಳಿದುಬಂದಿದೆ. ”ಆತನೊಂದಿಗೆ ನಾನು ಹತ್ತಿರದ ಸಂಪರ್ಕ ಹೊಂದಿರಲಿಲ್ಲ. ವ್ಯಕ್ತಿ ಯಾರು ಎಂಬುದು ನನಗೆ ಗೊತ್ತಿದೆ. ಆದರೂ ಸುರಕ್ಷತೆ ದೃಷ್ಟಿಯಿಂದ ನಾನು, ಉಪಾಧ್ಯಕ್ಷ ಮೈಕ್ ಪೆನ್ಸ್ ಮತ್ತು ಶ್ವೇತಭವನದ ಇತರ ಸಿಬ್ಬಂದಿಗಳು ಪ್ರತಿದಿನ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ನಿನ್ನೆ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ನಿನ್ನೆ ಮತ್ತು ಇಂದು ನಾನು ಮತ್ತು ಮೈಕ್ ಪೆನ್ಸ್ ಕೊರೋನಾ ಪರೀಕ್ಷೆ ಮಾಡಿಸಿಕೊಂಡೆವು. ಎರಡು ಬಾರಿ ಕೂಡ ನೆಗೆಟಿವ್ ಬಂದಿದೆ. ವಾರಕ್ಕೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಸೋಂಕು ಬಂದಿದ್ದರೆ ಕೂಡಲೇ ಪತ್ತೆಯಾಗಲಿಕ್ಕಿಲ್ಲ ಎಂದು ಪ್ರತಿದಿನ ಮಾಡಿಸಿಕೊಳ್ಳುತ್ತೇವೆ ಎಂದರು.
Follow us on Social media