ನವದೆಹಲಿ: ಸತತ 14ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಏರಿಕೆಯಾಗಿದ್ದು, ವಾಹನ ಸವಾರರನ್ನು ಕಂಗೆಡಿಸಿದೆ.
ಶನಿವಾರ ಪೆಟ್ರೋಲ್ ಲೀಟರ್’ಗೆ 0.51 ಪೈಸೆ ಹಾಗೂ ಡೀಸೆಲ್ 0.61 ಪೈಸೆ ಏರಿಕೆ ಮಾಡಲಾಗಿದೆ. ಹೀಗಾಗಿ ಎರಡು ವಾರಗಳ ಅಂತರದಲ್ಲಿ ಪೆಟ್ರೋಲ್ ರೂ.5.88 ಹಾಗೂ ಡೀಸೆಲ್ ರೂ.6.50 ಏರಿಕೆಯಾದಂತಾಗಿದೆ.
ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಶುಕ್ರವಾರ ಲೀಟರ್’ಗೆ ರೂ. 81.42 ಹಾಗೂ ಡೀಸೆಲ್ ರೂ.73.89 ಆಗಿದೆ.
ಅಂತರಾಷ್ಟ್ರೀಯ ಕಚ್ಚಾತೈಲ ದರಕ್ಕೆ ತಕ್ಕಂತೆ ತೈಲ ಕಂಪನಿಗಳು ಜೂ.7ರಿಂದ ತೈಲ ದರಗಳನ್ನು ದೈನಂದಿನ ಪರಿಷ್ಕರಣೆ ಮಾಡುತ್ತಿವೆ.
Follow us on Social media