ಪುತ್ತೂರು: ಮುಕ್ವೆ ಜುಮಾ ಮಸೀದಿಯ ಪರಿಸರದಲ್ಲಿ ಪುರಾತನ ಕಾಲದ ಎರಡು ವಸ್ತುಗಳು ಪತ್ತೆಯಾಗಿದ್ದು, ಇವುಗಳ ವಿವರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸುಮಾರು 100 ವರ್ಷಗಳ ಇತಿಹಾಸ ಇರುವ ಈ ಮಸೀದಿ ಪ್ರಾರಂಭದಲ್ಲಿ ಹೆಂಚಿನ ಮಾಡನ್ನು ಹೊಂದಿತ್ತು. ಕಾಲಕ್ರಮೇಣ ಮಸೀದಿಯನ್ನು ನವೀಕರಣ ಮಾಡಲಾಗಿತ್ತು. ಈ ಮಸೀದಿಯಲ್ಲಿ ಜಮಾತಿನ ಬಡವರಿಗೆ ಅಕ್ಕಿಯನ್ನು ವಿತರಣೆ ಮಾಡಲಾಗುತ್ತಿತ್ತು. ಅಕ್ಕಿ ಅಳೆಯಲು ಹಿತ್ತಾಳೆಯ ಸೇರು ಬಳಕೆಯಲ್ಲಿತ್ತು. ಮಸೀದಿ ನವೀಕರಣದ ವೇಳೆ ನಾಪತ್ತೆಯಾಗಿದ್ದ ಸೇರು ಎರಡು ದಿನಗಳ ಹಿಂದೆ ಕಾಮಗಾರಿ ನಡೆಸುವ ವೇಳೆ ಪತ್ತೆಯಾಗಿದೆ. ಸೇರಿನ ಹೊರಭಾಗದಲ್ಲಿ ಪೈಗಂಬರ್ ಸಮಕಾಲೀನ ಇಸ್ಲಾಂ ವಿದ್ವಾಂಸರ ಹೆಸರುಗಳನ್ನು ಕೆತ್ತಲಾಗಿದೆ.
ಹಿಂದೆ ಮಸೀದಿಯಲ್ಲಿ ಅಕ್ಕಿ ವಿತರಿಸಲು ಬಳಕೆಯಲ್ಲಿದ್ದ ಹಳೆಯ ಕಾಲದ ಸೇರು ಮಸೀದಿ ನವೀಕರಣದ ವೇಳೆ ಮಣ್ಣಿನಡಿಯಲ್ಲಿ ಹೂತು ಹೋಗಿರಬಹುದು.ಅದು ಈಗ ಸಿಕ್ಕಿದೆ.ಸುಮಾರು 6 ವರ್ಷಗಳಷ್ಟು ಹಳೆಯ ಸೇರು ಇದಾಗಿರಬಹುದು ಎನ್ನಲಾಗಿದೆ.
