ಪುತ್ತೂರು : ಬೈಕ್‌ನಲ್ಲಿ ಬಂದ ಇಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕರಿಮಣಿ ಸರ ಎಳೆದುಕೊಂಡು ಪರಾರಿಯಾದ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಕೋನಡ್ಕದಲ್ಲಿ ನಡೆದಿದೆ.
ರತ್ನಾ ಎಂಬವರು ಮನೆಗೆ ಹೋಗುತ್ತಿದ್ದ ವೇಳೆ ರೆಂಜ ಕಡೆಯಿಂದ ಚೂರಿಪದವು ಕಡೆಗೆ ಹೋಗುತ್ತಿದ್ದ ಬೈಕ್ ಸವಾರ ಅಕ್ಕ ಎಂದು ಕರೆಯುತ್ತಾ, ಮಹಿಳೆಯ ಕುತ್ತಿಗೆಯ ಕರಿಮಣಿ ಸರ ಎಳೆದಿದ್ದಾನೆ.ಇನ್ನು ಮಹಿಳೆ ಕಿರುಚಿದ್ದು, ಕರಿಮಣಿ ಸರ ಬಿಗಿಯಾಗಿ ಹಿಡಿದುಕೊಂಡು ಪ್ರತಿರೋಧ ತೋರಿದ್ದಾರೆ. ಆರೋಪಿ ಬಲವಾಗಿ ಎಳೆದ ಪರಿಣಾಮ ಅರ್ಧ ಸರ ಕಳ್ಳನ ಪಾಲಾಗಿದೆ.
ಕಳವಾದ ಕರಿಮಣಿಯ ಮೌಲ್ಯ 50 ಸಾವಿರ ರೂ. ಎಂದು ಅಂದಾಜಿಸಲಾಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media