ಪುತ್ತೂರು : ಮಂಗಳೂರಿನಿಂದ ಪುತ್ತೂರಿಗೆ ಶನಿವಾರ ಆಗಮಿಸಿದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ತರಕಾರಿ ಪಾರ್ಸೆಲ್‌ನಲ್ಲಿ ದನದ ಮಾಂಸ ಪತ್ತೆಯಾಗಿದೆ.
ಈ ಬಸ್ಸಿನಲ್ಲಿ ದನದ ಮಾಂಸ ಸಾಗಾಟ ಆಗುತ್ತಿದೆ ಎಂಬ ಹಿಂದೂ ಸಂಘಟನೆಯ ಖಚಿತ ಮಾಹಿತಿ ಮೇರೆಗೆ ಬಸ್ ನಿಲ್ದಾಣಕ್ಕೆ ಆಗಮಿಸಿದ ಪೊಲೀಸರು ಪಾರ್ಸೆಲ್ ತಪಾಸಣೆ ನಡೆಸಿದಾಗ ಸುಮಾರು 5 ಕೆ.ಜಿ ದನದ ಮಾಂಸ ಪತ್ತೆಯಾಗಿದೆ.ಈ ವಿಚಾರವಾಗಿ ನಿರ್ವಾಹಕನನ್ನು ವಿಚಾರಿಸಿದಾಗ, ಪಾರ್ಸೆಲ್ ಹೇಗೆ ಬಸ್ಸಿನ ಒಳಗೆ ಬಂದಿದೆ ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಪಾರ್ಸೆಲ್‌ಗೆ ಸಂಬಂಧಿಸಿ ನಿರ್ವಾಹಕ ಶಾಂತಪ್ಪ ಜವಾಬ್ದಾರರಾಗಿರುವುದರಿಂದ ಅವರ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media