ಪುತ್ತೂರು: ಬಸ್ಸು ಚಲಿಸುತ್ತಿರುವಾಗಲೇ ವ್ಯಕ್ತಿಯೋರ್ವ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿರುವ ಘಟನೆ ಇಂದು ಪುತ್ತೂರು ತಾಲೂಕಿನ ಕುಂಬ್ರದಲ್ಲಿ ನಡೆದಿದೆ.
ಬೆಳ್ಳಾರೆಯಿಂದ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೆಯ್ಯೂರು ಗ್ರಾಮದ ಮಾಡಾವು ನಿವಾಸಿ ಸುಲೈಮಾನ್(60) ಗಂಭೀರ ಗಾಯಗೊಂಡವರು.
ಸುಲೈಮಾನ್ ಅವರು ಮಾಡಾವಿನಿಂದ ಕುಂಬ್ರಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದು, ಕುಂಬ್ರ ತಲುಪುತ್ತಿದ್ದಂತೆ ಬಸ್‌ನಿಂದ ಇಳಿಯಲು ಬಸ್ಸಿನೊಳಗಡೆ ನಿಂತುಕೊಂಡಿದ್ದ ವೇಳೆ ಬಸ್ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮ ಸುಲೈಮಾನ್‌ರವರು ಬಸ್ಸಿನಿಂದ ಹೊರಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಗಾಯಾಳುವನ್ನು ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ಗ್ರಾಮಾಂತರ ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ಎಂದು ವರದಿಯಾಗಿದೆ.
Follow us on Social media