ಪುತ್ತೂರು: ಅರಣ್ಯ ಇಲಾಖೆಯ ವಿಶೇಷ ತಂಡ ಕುಖ್ಯಾತ ಅಂತರ್ ರಾಜ್ಯ ದಂತಚೋರರನ್ನು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಘಟನೆ ಇಂದು ನಡೆದಿದೆ.
ಶಶಿಕುಮಾರ್, ಸತೀಶ್ , ವಿಜ್ಞೇಶ್, ವಿನಿತ್, ಸಂಪತ್‌ಕುಮಾರ, ರತೀಶ ಬಂಧಿತ ಆರೋಪಿಗಳು.
ಮಾಣಿ-ಮೈಸೂರು ಬೈಪಾಸ್ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಮಹಾವೀರ ಆಸ್ಪತ್ರೆಗೆ ತಿರುಗುವ ಜಂಕ್ಷನ್ನಲ್ಲಿ ಆರೋಪಿಗಳನ್ನು ಅಡ್ಡಗಟ್ಟಿ ದಂತ ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ತಮಿಳುನಾಡು ಮತ್ತು ಕೇರಳ ಮೂಲದವರು ಎಂದು ಗುರುತಿಸಲಾಗಿದ್ದು, 6 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಸದರಿ ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ Y K ದಿನೇಶ್ ಕುಮಾರ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ V P ಕಾರ್ಯಪ್ಪ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಕಿರಣ್ ಉಪ ವಲಯ ಅರಣ್ಯಾಧಿಕಾರಿ ಲೋಕೇಶ್ S N,
ಶಿವಾನಂದ್ ಆಚಾರ್ಯ, ಪ್ರಕಾಶ್ B T,ಕುಮಾರಸ್ವಾಮಿ, ಮೆಹಬೂಬ್, ಪ್ರಸಾದ್,ಅರಣ್ಯ ರಕ್ಷಕರು ನಿಂಗರಾಜ್,ಸುಧೀರ್,ಸತ್ಯನ್,ದೀಪಕ, ಉಮೇಶ,ಇಲಾಖೆ ವಾಹನ ಚಾಲಕ ಜಗದೀಶ್, ರೋಹಿತ್ ಪಾಲ್ಗೊಂಡಿದ್ದರು.
Follow us on Social media