ಪುತ್ತೂರು : ಅಪ್ರಾಪ್ತ ಬಾಲಕನಿಗೆ ದಾರಿ ಮಧ್ಯೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ನೆಕ್ರಾಜೆ ನಿವಾಸಿ ಶ್ರೀಜಿತ್ ಬಂಧಿತ ಆರೋಪಿ. ಈತ ಎ.22 ರಂದು ಅಪ್ರಾಪ್ತ ಬಾಲಕನನ್ನು ಅಜ್ಜಿಗೆ ಮನೆಗೆ ಬಿಡುವೆನೆಂದು ಹೇಳಿ ಕರೆದೊಯ್ದಿದ್ದಾನೆ. ದಾರಿ ಮಧ್ಯೆ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ. ಬಾಲಕನಿಗೆ ಈತ ಅಪರಿಚಿತನಾಗಿದ್ದ. ಮನೆಯಲ್ಲಿ ಬಾಲಕ ವಿಷಯ ತಿಳಿಸಿದ ಕೂಡಲೇ ಮನೆಮಂದಿ ವ್ಯಕ್ತಿ ವಿರುದ್ದ ದೂರು ದಾಖಲಿಸಿದ್ದರು. ಆರೋಪಿ ಪತ್ತೆಗೆ ಕಾರ್ಯಪ್ರವೃತ್ತರಾದ ಪೊಲೀಸರು 22 ದಿನಗಳ ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವನೆ ಭಗವಾನ್, ಅಪರ ಅಧೀಕ್ಷಕ ಕುಮಾರ ಚಂದ್ರ, ಪುತ್ತೂರು ಡಿವೈಎಸ್ಪಿ ಡಾ| ಗಾನಾ ಪಿ. ಕುಮಾರ್ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಉಪಮೇಶ್ ಉಪ್ಪಳಿಕೆ ಅವರ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಉದಯರವಿ ನೇತೃತ್ವದ ತಂಡ ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow us on Social media