Breaking News

ಪುತ್ತೂರು: ಅಡಿಕೆ ವ್ಯಾಪಾರಿಗೆ ಚೂರಿ ಇರಿದು 4 ಲಕ್ಷ ರೂ. ದೋಚಿದ ದುಷ್ಕರ್ಮಿಗಳು

ಪುತ್ತೂರು : ಬೈಕ್‌ನಲ್ಲಿ ತೆರಳುತ್ತಿದ್ದ ಅಡಿಕೆ ವ್ಯಾಪಾರಿಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಚೂರಿ ಇರಿದು ವ್ಯಾಪಾರಿಯ ಬಳಿ ಇದ್ದ 4 ಲಕ್ಷ ರೂ. ಹಣವನ್ನು ದೋಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿಯ ಪೆರ್ನೆ ಎಂಬಲ್ಲಿ ನಡೆದಿದೆ.

ದೀಪಕ್‌ ಶೆಟ್ಟಿ ಕೃಷಿಕರಿಂದ ಅಡಿಕೆ ಖರೀದಿಸಿ ವ್ಯಾಪಾರ ಮಾಡುತ್ತಿದ್ದರು. ಇಂದು ಅಡಿಕೆಯನ್ನು ಮಾರಿ ಅದರಿಂದ ದೊರೆತ 4 ಲಕ್ಷ ರೂ. ನಗದಿನೊಂದಿಗೆ ಬೈಕ್‌ನಲ್ಲಿ ಪೆರ್ನೆ ಒಳಗಿನ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದಾಗ ಸಂದರ್ಭ ಇನ್ನೊಂದು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ದೀಪಕ್‌ ಶೆಟ್ಟಿಯ ಬೆನ್ನಿಗೆ ಮತ್ತು ಕುತ್ತಿಗೆಗೆ ಇರಿದು ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ಇನ್ನು ದೀಪಕ್‌ಗೆ ಗಂಭೀರವಾದ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×