ಪುಣೆ : ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಹನ್ನೆರಡು ರನ್ ಗಳಿಂದ ಗೆಲುವು ದಾಖಲಿಸಿಕೊಂಡಿದ್ದು, ಮುಂಬೈ ತಂಡ ಸತತ ಸೋಲಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತಂಡ ಐದು ವಿಕೆಟ್ ನಷ್ಟಕ್ಕೆ 198 ರನ್ ಗಳ ಗುರಿ ನೀಡಿದೆ.
ಪಂಜಾಬ್ ಪರ ಮಾಯಾಂಕ್ 52, ಧವನ್ 70, ಜಿತೇಶ್ ಶರ್ಮಾ 30 ರನ್ ಗಳಿಸಿದರು.ಮುಂಬೈ ಪರ ಬಾಸಿಲ್ ತಂಪಿ 2 ವಿಕೆಟ್ ಪಡೆದರು.ಮುಂಬೈ ಪರ ಬ್ರೇವಿಸ್ 49, ತಿಲಕ್ ವರ್ಮಾ 36, ಸೂರ್ಯಕುಮಾರ್ ಯಾದವ್ 43 ರನ್ ಗಳಿಸಿದರು.
Follow us on Social media