ಮಂಗಳೂರು : ಸೃಷ್ಟಿ ಪ್ರೊಡೆಕ್ಷನ್ ಮತ್ತು ಕರಾವಳಿ ಲಾಂಛನದಲ್ಲಿ ಸತೀಶ್ ಮತ್ತು ಸಾಧನಾ ರೈ ನಿರ್ಮಾಣ ಮಾಡಿದ ಹೆಚ್.ಡಿ.ಆರ್ಯ ನಿರ್ದೇಶನದ ಪಿರ್ಕಿಲು ತುಳು ಸಿನಿಮಾದ ಶೂಟಿಂಗ್ ಮುಗಿದಿದ್ದು ಸದ್ಯ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ.
ಎರಡು ಹಂತಗಳಲ್ಲಿ ಪಿರ್ಕಿಲು ಸಿನಿಮಾದ ಚಿತ್ರೀಕರಣ ನಡೆದಿದ್ದು ಸುಳ್ಯ, ಪುತ್ತೂರು, ಉಡುಪಿ ಹಾಗೂ ವಿಟ್ಲ ಭಾಗದಲ್ಲಿ ಭಾಗದಲ್ಲಿ ಸುಮಾರು 21 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಈ ಸಿನಿಮಾದ ನಿರ್ದೇಶಕರಾದ ಹೆಚ್.ಡಿ.ಆರ್ಯರವರೇ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ನೀಡಿದ್ದಾರೆ. ಪ್ರಚಾರ ಕಲೆ ಎ.ಆರ್.ಕ್ರಿಯೇಷನ್ ಅವರದ್ದಾಗಿದೆ.ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಸಿನಿಮಾಕ್ಕೆ ಸಂಗೀತಕ್ಕೆ ಧ್ವನಿ ನೀಡಿದ್ದು ಎ.ಆರ್. ಕೃಷ್ಣ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.ಸಾಹಸ ನಿರ್ದೇಶನವನ್ನು ಸುರೇಶ್ ಶೆಟ್ಟಿ ಮಾಡಿದ್ದು ಅವರಿಗೆ ಧನು ರೈ, ಮೋಹನ್ ಸಹಕಾರ ನೀಡಿದ್ದಾರೆ.ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ದೀಪಕ್ ರೈ, ಪಾಣಾಜೆ, ರವಿರಾಮ ಕುಂಜ, ವರದೇಶ್, ಸುದೇಶ್ ರೈ, ಸಲೋಮಿ ಡಿ ಸೋಜಾ, ಹರಿಣಿ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಇರಲಿದ್ದಾರೆ.
Follow us on Social media