ನವದೆಹಲಿ: ದೇಶಭ್ರಷ್ಟ ಆರ್ಥಿಕ ಅಪರಾಧಿ ವಜ್ರದ ವ್ಯಾಪಾರಿ ನೀರವ್ ಮೋದಿಗೆ ಸೇರಿದ್ದ 329.66 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ತಿಳಿಸಿದೆ.
ಮುಂಬೈನ ಪಿಎನ್‌ಬಿ ಶಾಖೆಯೊಂದರಲ್ಲಿ 2 ಬಿಲಿಯನ್ ಯುಎಸ್ ಡಾಲರ್‌ಗಳಷ್ಟು ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಅವರನ್ನು ಮನಿ ಲಾಂಡರಿಂಗ್ ಆರೋಪದ ಮೇಲೆ ಇಡಿ ತನಿಖೆ ನಡೆಸುತ್ತಿದೆ.
“ಮುಟ್ಟುಗೋಲು ಹಾಕಿದ ಆಸ್ತಿಗಳು ಮುಂಬೈ ವರ್ಲಿ ಸಮುದ್ರ ತೀರದಲ್ಲಿನ ಕಟ್ಟಡ ಸಂಕೀರ್ಣದ ನಾಲ್ಕು ಫ್ಲ್ಯಾಟ್‌ಗಳಾಗಿದೆ. ಅಲ್ಲದೆ ಸಮುದ್ರದ ಪಕ್ಕದ ಫಾರ್ಮ್ ಹೌಸ್ ಮತ್ತು ಅಲಿಬಾಗ್‌ನಲ್ಲಿರುವ ಭೂಮಿ, ಜೈಸಲ್ಮೇರ್‌ನಲ್ಲಿ ವಿಂಡ್ ಮಿಲ್, ಲಂಡನ್‌ನಲ್ಲಿ ಒಂದು ಫ್ಲಾಟ್ ಮತ್ತು ಯುಎಇಯಲ್ಲಿನ ವಸತಿ ಫ್ಲ್ಯಾಟ್‌ಗಳು, ಷೇರುಗಳು ಮತ್ತು ಬ್ಯಾಂಕ್ ಠೇವಣಿ ಗಳೂ ಸೇರಿದೆ”
ಮುಂಬೈನ ವಿಶೇಷ ನ್ಯಾಯಾಲಯವು ಜೂನ್ 8 ರಂದು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿಗೆ ಅಧಿಕಾರ ನೀಡಿತ್ತು. ನೀರವ್ ಮೋದಿಯನ್ನು ಕಳೆದ ವರ್ಷ ಡಿಸೆಂಬರ್ 5 ರಂದು ಅದೇ ನ್ಯಾಯಾಲಯವು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಿತು. “ಎಫ್ಇಒ ಕಾಯ್ದೆ 2018 ರ ಅಡಿಯಲ್ಲಿ ಇಡಿ 329.66 ಕೋಟಿ ರೂ. ಆಸ್ತಿಗಳನ್ನು ಲಗತ್ತಿಸಿದೆ, ಅದು ಈಗ ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಮುಟ್ಟುಗೋಲು ಹಾಕಿಕೊಂಡಿದೆ” ಎಂದು ಅದು ಹೇಳಿದೆ.
ನೀರವ್ ಮೋದಿ (49) ಅವರನ್ನು 2019 ರ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ಬಂಧಿಸಿದ ನಂತರ ಯುಕೆ ಜೈಲಿನಲ್ಲಿ ಇರಿಸಲಾಗಿದ್ದು, ಪ್ರಸ್ತುತ ಅವರು ಭಾರತಕ್ಕೆ ಹಸ್ತಾಂತರವಾಗುವುದರ ವಿರುದ್ಧ ಹೋರಾಟ ನಡೆಸಿದ್ದಾರೆ.
Follow us on Social media