Breaking News

ಪಿಎಂ ಕೇರ್ಸ್ ಮೂಲಕ 322.5 ಕೋಟಿ ವೆಚ್ಚದಲ್ಲಿ ಡಿಆರ್‌ಡಿಒ ಅಭಿವೃದ್ಧಿಪಡಿಸಿದ 1.5 ಲಕ್ಷ ಆಕ್ಸಿಕೇರ್ ಯುನಿಟ್‌ ಖರೀದಿ

ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಭಿವೃದ್ಧಿಪಡಿಸಿದ 1.5 ಲಕ್ಷ ಯುನಿಟ್‌ಗಳ ‘ಆಕ್ಸಿಕೇರ್’ ವ್ಯವಸ್ಥೆಯನ್ನು 322.5 ಕೋಟಿ ರೂ.ಗಳ ವೆಚ್ಚದಲ್ಲಿ ಖರೀದಿಸಲು ಪಿಎಂ ಕೇರ್ಸ್ ಫಂಡ್ ಅನುಮತಿ ನೀಡಿದೆ.

ಆಕ್ಸಿಕೇರ್ ಎನ್ನುವುದು ಎಸ್‌ಪಿಒ 2 ಆಧಾರಿತ ಆಮ್ಲಜನಕ ಪೂರೈಕೆ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯಿಂದ ರೋಗಿಗಳಿಗೆ ಆಮ್ಲಜನಕ ನೀಡುವಿಕೆ ಮಟ್ಟ ನಿಯಂತ್ರಿಸುವ ಹಾಗೂ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಹೈಪೋಕ್ಸಿಯಾ ಸ್ಥಿತಿಗೆ ತಲುಪದಂತೆ ತಡೆಯಬಲ್ಲ ಆಕ್ಸಿಕೇರ್ ಯುನಿಟನ್ನು ಡಿಆರ್‌ಡಿಒದ ಬೆಂಗಳೂರಿನ ಡಿಫೆನ್ಸ್ ಬಯೋ-ಎಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಲ್ಯಾಬೊರೇಟರಿ (ಡೆಬೆಲ್) ಅಭಿವೃದ್ಧಿಪಡಿಸಿದೆ.

ದೇಶದಲ್ಲಿ ಕೊರೋನಾ ದಿನ ಕಳೆದಂತೆ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕೋವಿಡ್ 19 ಸೋಂಕಿತರ ಚಿಕಿತ್ಸೆಗೆ ನೆರವಾಗಲು ಪಿಎಂ ಕೇರ್ಸ್ ನಿಧಿಯಡಿ 322.5 ಕೋಟಿ ರುಪಾಯಿ ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಖರೀದಿ ಮಾಡಲಾಗುತ್ತಿದೆ. 

ಭಾರತೀಯ ಯೋಧರಿಗಾಗಿ ಈ ಆಕ್ಸಿಕೇರ್ ಯುನಿಟ್ ಬಳಸಲಾಗುತ್ತದೆ. ಎತ್ತರದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಯೋಧರಿಗೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗುವುದಿಲ್ಲ. ಹೀಗಾಗಿ ಈ ಕಿಟ್ ಅಲ್ಲಿನ ಯೋಧರಿಗೆ ನೆರವಾಗುತ್ತದೆ. 

ಇದೀಗ ದೇಶದಲ್ಲಿ ಕೊರೋನಾ ಎರಡನೇ ಅಲೆಯಲ್ಲಿ ಹೆಚ್ಚು ಜನರು ದೇಹದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಅಂತಹವರಿಗೆ ಈ ಕಿಟ್ ಗಳು ಹೆಚ್ಚು ನೆರವಾಗಲಿದೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×