ಕರಾಚಿ : ಪಾಕಿಸ್ತಾನ ವಾಯುಪಡೆಯ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಹಿಂದೂ ಯುವಕನೋರ್ವ ವಾಯುಸೇನೆಯ ಫೈಟರ್ ಪೈಲೆಟ್ ಆಗಿ ನೇಮಕಗೊಂಡಿದ್ದಾನೆ.
ಪಾಕಿಸ್ತಾನ ವಾಯುಸೇನೆ (ಪಿಎಎಫ್)ಯ ಜನರಲ್ ಡ್ಯೂಟಿ ಪೈಲಟ್ ಅಧಿಕಾರಿಯಾಗಿ ಮತ್ತು ಫೈಟರ್ ಪೈಲೆಟ್ ಆಗಿ ರಾಹುಲ್ ದೇವ್ ನೇಮಕಗೊಂಡಿದ್ದಾರೆ. ರಾಹುಲ್ ಸಿಂಧ್ ಪ್ರಾಂತ್ಯದಲ್ಲಿರುವ ಅತಿ ತೊಡ್ಡ ಜಿಲ್ಲೆಯ ಥಾಪರ್‍ಕರ್ ಪ್ರದೇಶದ ನಿವಾಸಿ ಎಂದು ಪಾಕ್ ಮಾಧ್ಯಮ ವರದಿ ಮಾಡಿದೆ.
ಈ ಜಿಲ್ಲೆಯಲ್ಲಿ ಮಾತ್ರ ಅತೀ ದೊಡ್ಡ ಜನಸಂಖ್ಯೆಯಲ್ಲಿ ಹಿಂದೂ ಸಮುದಾಯದ ವಾಸವಾಗಿದೆ. ಪಾಕ್ ನಲ್ಲಿ ಹಿಂದೂಗಳನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುತ್ತದೆ. ಇನ್ನು ದೇವ್ ವಾಯುಸೇನೆ ಪೈಲಟ್ ಆಗಿ ನೇಮಕವಾಗಿರುವುದಕ್ಕೆ ಅಖಿಲ ಪಾಕಿಸ್ತಾನ ಹಿಂದು ಪಂಚಾಯತ್ ಕಾರ್ಯದರ್ಶಿ ರವಿ ದವಾನಿ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಅನೇಕ ಸದಸ್ಯರು ನಾಗರಿಕ ಸೇವೆಯ ಜತೆಗೆ ಸೇನೆಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ವಾಯು ಪಡೆಯ ಹಿಂದೂ ಪೈಲೆಟ್ ಆಗಿ ಇಂದು ನೇಮಕಗೊಂಡಿರುವುದು ದೇಶದ ಇತಿಹಾಸದಲ್ಲೇ ಇದೆ ಮೊದಲುಖುಷಿಪಟ್ಟಿದ್ದಾರೆ.
Follow us on Social media