ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯದ ಕಂಥಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು.
ಈ ಬಾರಿಯ ಪ್ರಧಾನಿ ಭಾಷಣದಲ್ಲಿ ಅತ್ಯಪರೂಪದ ಘಟನೆಯೊಂದು ನಡೆದಿದೆ. ಪ್ರಧಾನಿ ಮೋದಿ ಇದ್ದ ವೇದಿಕೆಗೆ ಆಗಮಿಸಿದ ಕಾರ್ಯಕರ್ತರು ಪ್ರಧಾನಿ ಮೋದಿ ಕಾಲಿಗೆ ನಮಸ್ಕರಿಸಲು ಯತ್ನಿಸಿದರು. ತಕ್ಷಣವೇ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ ಕಾರ್ಯಕರ್ತರನ್ನು ತಡೆದು, ತಾವೇ ಕಾರ್ಯಕರ್ತರ ಪಾದಸ್ಪರ್ಶಿಸಿ ಪ್ರತ್ಯಭಿವಂದನೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕರ್ತರೆಡೆಗಿನ ಈ ನಡೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ವಿಡಿಯೋ ವೈರಲ್ ಆಗತೊಡಗಿದೆ.
ಮೇ.2 ರಿಂದ ನೈಜ ಬದಲಾವಣೆ:
ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೇ.2 ಕ್ಕೆ ಮಮತಾ ಬ್ಯಾನರ್ಜಿ ಸರ್ಕಾರ ನಿರ್ಗಮನ ನಿಗದಿಯಾಗಿದು, ಈ ಮೂಲಕ ರಾಜ್ಯದಲ್ಲಿ ನೈಜ ಬದಲಾವಣೆ ಕಾಣಸಿಗಲಿದೆ ಎಂದು ಮೋದಿ ಹೇಳಿದ್ದಾರೆ.
Follow us on Social media