ಉತ್ತರ ಕನ್ನಡ : ಉತ್ತರ ಕನ್ನಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 63ರ ಯಲ್ಲಾಪುರ ಅರೆಬೈಲ್ ಘಟ್ಟದಲ್ಲಿ ಹಾಲಿನ ಟ್ಯಾಂಕರ್ ಪಲ್ಟಿಯಾಗಿದ್ದು, ಹಾಲನ್ನು ತುಂಬಿಸಿಕೊಳ್ಳಲು ಜನರು ಮುಗಿಬಿದ್ದ ಪ್ರಸಂಗ ಶುಕ್ರವಾರ ನಡೆದಿದೆ.
ಹೆದ್ದಾರಿಗಳಲ್ಲಿ ಡೀಸೆಲ್, ಪೆಟ್ರೋಲ್, ಮದ್ಯದ ಟ್ಯಾಂಕರ್ ಪಲ್ಟಿಯಾದಾಗ ಜನ ಅದನ್ನು ತುಂಬಿಸಿಕೊಳ್ಳಲು ಓಡಿ ಬರುವುದನ್ನು ನೋಡಿದ್ದೇವೆ. ಇದೀಗ ಹಾಲಿನ ಟ್ಯಾಂಕರ್‌ನ ಸರದಿಯಾಗಿದೆ.ಕೊಲ್ಲಾಪುರದಿಂದ ಕೇರಳಕ್ಕೆ ತೆರಳುತ್ತಿದ್ದ ಹಾಲಿನ ಟ್ಯಾಂಕರ್ ಬ್ರೇಕ್ ಫೈಲ್ ಆಗಿ ಅರೆಬೈಲ್ ಘಟ್ಟದಲ್ಲಿ ಹೆದ್ದಾರಿಯಲ್ಲೇ ಪಲ್ಟಿಯಾಗಿದೆ. ಈ ವೇಳೆ ಪಲ್ಟಿಯಾದ ಟ್ಯಾಂಕರ್‌ನಿಂದ ಹಾಲು ಹೊರ ಚೆಲ್ಲಿ ರಸ್ತೆಯಲ್ಲಿ ಹೊಳೆಯಂತೆ ಹರಿದಿದೆ. ವಿಷಯ ತಿಳಿದ ಜನರು ಟ್ಯಾಂಕರ್‌ನಿಂದ ಹೊರ ಚೆಲ್ಲುತ್ತಿರುವ ಹಾಲನ್ನು ಪಡೆದುಕೊಳ್ಳಲು ಬಾಟಲಿ, ಕ್ಯಾನ್‌ಗಳನ್ನು ಹಿಡಿದು ಮುಗಿಬಿದ್ದಿದ್ದಾರೆ.
Follow us on Social media