ಕೊರೋನಾ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಆಯುರ್ವೇದವು ಒಂದು ಉತ್ತಮ ಮಾರ್ಗವಾಗಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಅವರು ಹೇಳಿದ್ದಾರೆ.
ಕಳೆದ 40 ವರ್ಷಗಳಿಂದ ನಾನು ವಿಶ್ರಾಂತಿ ಪಡೆದಿಲ್ಲ ಮತ್ತು ಪ್ರತಿದಿನ ಬೆಳಗ್ಗೆ 4 ರಿಂದ ರಾತ್ರಿ 10 ರವರೆಗೆ ಸಕ್ರಿಯವಾಗಿರುತ್ತೇನೆ ಎಂದು ಬಾಬಾ ರಾಮ್ ದೇವ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗಿನ ವೆಬ್ ಸಿರೀಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
‘ಆತ್ಮನಿರ್ಭರ್’(ಸ್ವಾವಲಂಬಿ) ಭಾರತ್ಗಾಗಿ, ದೇಶವು ಅಳವಡಿಸಿಕೊಳ್ಳಬಹುದಾದ ಐದು ವಿಷಯಗಳು ಯಾವುವು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮೂರು ಕೆಲಸಗಳನ್ನು ಮಾಡುತ್ತೇನೆ. ದೇಶವು ಖಾದ್ಯ ತೈಲದ ಮೇಲೆ ಸ್ವಾವಲಂಬಿಗಳಾಗಲು, ಅದು ಸೋಯಾ, ಸೂರ್ಯಕಾಂತಿ, ಸಾಸಿವೆ ಆಗಿರಲಿ, ಅದಕ್ಕಾಗಿ ಒಂದು ಚಳುವಳಿಯನ್ನು ರಚಿಸುತ್ತೇನೆ … ಹೀಗೆ ಮಾಡುವುದರಿಂದ ಮುಂದಿನ 5 -10 ವರ್ಷಗಳಲ್ಲಿ ನಾವು ಇತರರನ್ನು ಅವಲಂಬಿಸಬೇಕಾಗಿಲ್ಲ. ಈ ಕೆಲಸದ ಮೂಲಕ 5 ಲಕ್ಷಕ್ಕೂ ಹೆಚ್ಚು ಜನರಿಗೆ ಜೀವನೋಪಾಯಕ್ಕಾಗಿ ಉದ್ಯೋಗ ನೀಡುತ್ತೇನೆ. ಪತಂಜಲಿ ಮತ್ತು ರುಚಿ ಸೋಯಾ ಅವರ ವಿಭಿನ್ನ ಯೋಜನೆಗಳ ಮೂಲಕ ಮುಂದಿನ ಐದು ವರ್ಷಗಳಲ್ಲಿ ನಾನು 1 ಲಕ್ಷ ಕೋಟಿ ರೂ. ಕೊಡುಗೆ ನೀಡುತ್ತೇನೆ ಎಂದಿದ್ದಾರೆ.
ರಾಜಕಾರಣಿಗಳಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಯೋಗ ಗುರು, ಕೃಷಿ, ಕೈಗಾರಿಕೆ, ಉತ್ಪಾದನೆ, ವಾಹನಗಳಂತಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು ನಾವು ಭಾರತ ಕೇಂದ್ರಿತ ನೀತಿಗಳನ್ನು ರೂಪಿಸಬೇಕಾಗಿದೆ ಎಂದರು.
ಕೊವಿಡ್-19ಗೆ ಪತಂಜಲಿ ಔಷಧಿ ಕಂಡುಹಿಡಿಯಬಹುದೇ? ಅದರ ಮೇಲೆ ನಾವು ಕೆಲಸ ಮಾಡುತ್ತಲೇ ಇದ್ದೇವೆ ಮತ್ತು ಖಂಡಿತ ಯಶಸ್ವಿಯಾಗುತ್ತೇವೆ ಎಂದು ಬಾಬಾ ರಾಮ್ ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Source : The New Indian Express
Follow us on Social media