ಚಂಡೀಗಡ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಂಜಾಬ್‌ನ ಎಲ್ಲಾ 7 ಮಹಾನಗರ ಪಾಲಿಕೆಗಳಲ್ಲಿ ಕಾಂಗ್ರೆಸ್ ಪಕ್ಷ ಕ್ಲೀನ್ ಸ್ವೀಪ್ ಮಾಡಿದ್ದು ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯು ಫೆ.14ರಂದು ನಡೆದಿದ್ದು ಇದರ ಮತ ಎಣಿಕೆಯು ಬುಧವಾರ ನಡೆಯುತ್ತಿದೆ.
ಕಾಂಗ್ರೆಸ್ ಪಕ್ಷವು ಮೊಗಾ, ಹೊಶಿಯಾರ್ ಪುರ, ಕಪುರ್ಥಲ, ಅಬೊಹರ್, ಪಠಾಣ್ ಕೋಟ್, ಬಟಾಲ ಹಾಗೂ ಬಠಿಂಡಾ ಮಹಾನಗರ ಪಾಲಿಕೆಗಳಲ್ಲಿ ಜಯಸಾಧಿಸಿದ್ದು, ಈ ಪೈಕಿ ಬಠಿಂಡಾ ಮಹಾನಗರ ಪಾಲಿಕೆಯು 53 ವರ್ಷಗಳ ಬಳಿಕ ಕಾಂಗ್ರೆಸ್ ತೆಕ್ಕೆಗೆ ಸೇರಿದೆ.
ಇತ್ತೀಚೆಗಿನವರೆಗೆ ಶಿರೋಮಣಿ ಅಕಾಲಿದಳದೊಂದಿಗೆ (ಎಸ್‌ಎಡಿ) ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸ್ಪರ್ಧಿಸುತ್ತಿತ್ತು. ಇತ್ತೀಚೆಗೆ ಎಸ್‌ಎಡಿ ತನ್ನ ದೀರ್ಘ ಕಾಲದ ಮೈತ್ರಿ ಪಕ್ಷ ಬಿಜೆಪಿಯಿಂದ ದೂರ ಸರಿದಿತ್ತು. ಈ ಬಾರಿ ಬಿಜೆಪಿ ಹಾಗೂ ಎಸ್ ಎಡಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಬಿಜೆಪಿ ಭಾರೀ ಹಿನ್ನೆಡೆ ಸಾಧಿಸಿದೆ.
Follow us on Social media