Breaking News

ನ. 17ರಿಂದ ಪದವಿ, ಎಂಜನೀಯರಿಂಗ್‌, ಡಿಪ್ಲೊಮೋ ಕಾಲೇಜುಗಳ ಆರಂಭ: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಪದವಿ, ಎಂಜನೀಯರಿಂಗ್‌ ಹಾಗೂ ಡಿಪ್ಲೊಮೋ ಕಾಲೇಜುಗಳ ತರಗತಿಗಳನ್ನು ಇದೇ ನವೆಂಬರ್‌ 17ರಿಂದ ಪುನರಾರಂಭಿಸಲಾಗುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಸೋಮವಾರ ಕೋವಿಡ್‌ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಸರ್ಕಾರಿ, ತಾಂತ್ರಿಕ, ಡಿಪ್ಲೊಮೋ, ಅನುದಾನಿತ, ಅನುದಾನರಹಿತ ಕಾಲೇಜು, ವಿಶ್ವವಿದ್ಯಾಲಯ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಶಿಕ್ಷಣ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆಫ್‌ಲೈನ್‌ ತರಗತಿಗಳ ಆರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಎಸ್‌ಒಪಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಸೂಚನೆಗಳಿದ್ದು, ಅವುಗಳ ಪ್ರಕಾರವೇ ತರಗತಿಗಳು ನಡೆಯುತ್ತವೆ. ಹಾಗೆಯೇ, ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ನಿಗದಿತ ಸೂಚನೆಗಳಿವೆ ಎಂದು ತಿಳಿಸಿದ್ದಾರೆ.

ನ. 17ರಿಂದ ಭೌತಿಕ ತರಗತಿಗಳು ಆರಂಭಗೊಳ್ಳಲಿದೆ. ತರಗತಿಗಳಿಗೆ ಹಾಜರಾಗಲು ಬಯಸುವ ವಿದ್ಯಾರ್ಥಿಗಳು ಅವರ ಪೋಷಕರಿಂದ ನಿಗದಿತ ನಮೂನೆಯಲ್ಲಿ ಸಹಿ ಹಾಕಿದ ಒಪ್ಪಿಗೆ ಪತ್ರ ಸಲ್ಲಿಸಬೇಕು.

ತರಗತಿಗಳಲ್ಲಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ಕೊಠಡಿಗಳ ಅನುಸಾರ, ದೈಹಿಕ ಅಂತರ ಕಾಪಾಡಿಕೊಂಡು ತರಗತಿ ವೇಳಾಪಟ್ಟಿ ಸಿದ್ಧಪಡಿಸಬೇಕು ಎಂದು ಸೂಚಿಸಲಾಗಿದೆ.

ಬೋಧನಾ, ಪ್ರಯೋಗಾಲಯ ಮತ್ತು ಪ್ರಾಜೆಕ್ಟ್ ತರಗತಿಗಳನ್ನು ಅವಶ್ಯಕವಿದ್ದಲ್ಲಿ ಪಾಳಿ ವ್ಯವಸ್ಥೆಯ (shift system) ಮೇರೆಗೆ ನಡೆಸುವುದು.

ಭೌತಿಕ ತರಗತಿಗಳಿಗೆ ಹಾಜರಾಗಲು ಇಚ್ಛಿಸದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕವೇ ತರಗತಿಗಳನ್ನು ನಡೆಸುವುದು. ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಬಯಸಿದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಬಗ್ಗೆ ಇರುವ ಅನುಮಾನ ಅಥವಾ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಪ್ರತಿ ದಿನವು ಭೌತಿಕ ಸಂಪರ್ಕ ತರಗತಿಗಳನ್ನು (Contact Classes) ನಡೆಸುವುದು. 

ಸಂಪರ್ಕ ತರಗತಿಗಳನ್ನು ನಡೆಸುವಾಗ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಒಟ್ಟು ತರಗತಿ ಕೊಠಡಿಗಳ ಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಇಲಾಖೆಯಿಂದ ಹೊರಡಿಸಲಾಗಿರುವ ಮತ್ತು ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ ದೈಹಿಕ ಅಂತರವನ್ನು ಕಾಪಾಡಿಕೊಂಡು ಸುರಕ್ಷಿತವಾಗಿ ತರಗತಿಗಳನ್ನು ನಡೆಸಲು ಅವಶ್ಯಕವಿರುವಂತೆ ತರಗತಿ ವೇಳಾ ಪಟ್ಟಿಯನ್ನು ಕಾಲೇಜಿನ ಹಂತದಲ್ಲಿಯೇ  ಸಿದ್ದಪಡಿಸಿಕೊಳ್ಳುವುದು.

ಎಲ್ಲಾ ಅಧ್ಯಾಪಕರು ತಮ್ಮ ತರಗತಿಗಳ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಕುರಿತು ಮುಂದಿನ ಕನಿಷ್ಠ ಒಂದು ತಿಂಗಳ  ಅಧ್ಯಯನ  ಸಾಮಗ್ರಿಗಳನ್ನು ಪ್ರತಿ Period/ Sessionಗೆ ಸಂಬಂಧಿಸಿದAತೆ ತಯಾರಿಸಿ ವಿದ್ಯಾರ್ಥಿಗಳಿಗೆ ಟೆಲಿಗ್ರಾಂ/ವಾಟ್ಸಾಪ್/ಇ-ಮೇಲ್ ಮೂಲಕ ಕಡ್ಡಾಯವಾಗಿ ನೀಡುವುದು. ಅಧ್ಯಯನ ಸಾಮಗ್ರಿಗಳು Video Lectures, PowerPoint Presentations, E-Notes, E-Books, Audio Books ಮತ್ತು Practice Questions ಇತ್ಯಾದಿಗಳ ರೂಪದಲ್ಲಿ ಇರತಕ್ಕದ್ದು. ಸದರಿ ಅಧ್ಯಯನ ಸಾಮಗ್ರಿಗಳನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್‌ ಮಾಡತಕ್ಕದ್ದು.

ಇತರೆ ಮಾರ್ಗಸೂಚಿಗಳು
ಕಾಲೇಜಿನ ಸಂಪೂರ್ಣ ಕಟ್ಟಡ, ಮುಖ್ಯದ್ವಾರ, ಶೌಚಾಲಯ ಹಾಗೂ ಎಲ್ಲಾ ಕೊಠಡಿಗಳಲ್ಲಿನ ಪೀಠೋಪಕರಣ ಮತ್ತು ಪಠ್ಯಸಾಮಾಗ್ರಿಗಳನ್ನು ಸ್ಯಾನಿಟೈಸ್ ಮಾಡಿಸುವುದು.

ಬೋಧಕರು, ವಿದ್ಯಾರ್ಥಿಗಳು ಹಾಗೂ ಇತರೆ ಸಿಬ್ಬಂದಿ ಕಡ್ಡಾಯವಾಗಿ 3 ದಿನಗಳ ಮುಂಚೆ ಕೋವಿಡ್-19 (RTPCR)‌ ಪರೀಕ್ಷೆಯನ್ನು ಮಾಡಿಕೊಂಡು Test Report Negative ಇದ್ದಲ್ಲಿ ಮಾತ್ರ ವಿ‍ಶ್ವವಿದ್ಯಾಲಯ / ಕಾಲೇಜುಗಳಿಗೆ ಹಾಜರಾಗುವುದು.

ಎಲ್ಲಾ ಕಾಲೇಜುಗಳು ತಮ್ಮ ತಮ್ಮ ಸಮೀಪವಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗೊಂದಿಗೆ  Mapping ಮಾಡಿಕೊಳ್ಳವುದು.

ಪ್ರತಿ ತರಗತಿಯಿಂದ ಒಬ್ಬ ವಿದ್ಯಾರ್ಥಿಯನ್ನು ಗುರುತಿಸಿ ತನ್ನ ಸಹಪಾಠಿಗಳಲ್ಲೇನಾದರು ಕೋವಿಡ್‌ ಗೆ ಸಂಬಂಧಿಸಿದ ಲಕ್ಷಗಳನ್ನು ಕಂಡುಬಂದಲ್ಲಿ ಅದನ್ನು ಕೋವಿಡ್‌ ಕಾರ್ಯಪಡೆ / ಸೆಲ್‌ ಗಮನಕ್ಕೆ ತರುವಂತೆ ಸೂಚಿಸುವುದು.

ಕಾಲೇಜುಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರನ್ನು ಸ್ವತ: ತಂದು ಅವರೇ ಉಪಯೋಗಿಸುವುದು.

ಉಪನ್ಯಾಸಕರು ಕಡ್ಡಾಯವಾಗಿ ಮಾಸ್ಕ್‌ ಮತ್ತು Face Shield/ Visor ಅನ್ನು ಧರಿಸುವುದು. ಕಾಲೇಜುಗಳಲ್ಲಿ ಲೈಬ್ರರಿ ಮತ್ತು ಕ್ಯಾಂಟೀನ್‌ಗಳನ್ನು ತೆರೆಯುವಂತಿಲ್ಲ. ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಎನ್‌.ಸಿ.ಸಿ ಹಾಗೂ ಎನ್‌.ಎಸ್‌.ಎಸ್‌  ಚಟುವಟಿಕೆಗಳನ್ನು ಪ್ರಾರಂಭಿಸುವಂತಿಲ್ಲ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×