ಬೆಂಗಳೂರು: ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಮಧ್ಯರಾತ್ರಿ ಕೋರಮಂಗಲದ ಮುಖ್ಯ ರಸ್ತೆಯಲ್ಲಿ 40 ಸಾವಿರಕ್ಕೂ ಅಧಿಕ ಜನ ಒಂದೇ ಜಾಗದಲ್ಲಿ ಸೇರಿದ್ದು 100ಕ್ಕೂ ಹೆಚ್ಚು ಬಾರ್, ಪಬ್, ರೆಸ್ಟೋರೆಂಟ್‍ಗಳು ಫುಲ್ ಮಿರಮಿರ ಎನ್ನುತ್ತಿತ್ತು.
ಆದರೆ ಖಾಸಗಿ ಪಬ್ ಕಾರಿಡರ್‌ನಲ್ಲಿ ಪ್ರೇಮಿಗಳು ಮೈಮರೆತು ಅಸಭ್ಯವಾಗಿ ವರ್ತಿಸಿದ್ದರು. ಇದನ್ನು ನೋಡಿಕೊಂಡೇ ನಿಂತು ರಸ್ತೆ ಬ್ಲಾಕ್‍ಮಾಡಿ ನಿಂತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದರು.
ಪಬ್‍ಗಳೆಲ್ಲವೂ ಹೌಸ್ ಫುಲ್ ಆಗಿದ್ದವು. 12 ಗಂಟೆಯ ನಂತರ ಪಬ್‍ಗಳಿಂದ ಹೊರ ಬಂದ ನೂರಾರು ಯುವತಿಯರು, ಕುಡಿದು ಅಮಲು ಹೆಚ್ಚಾಗಿ ಬೀದಿ ಬೀದಿಗಳಲ್ಲಿ ಬಿದ್ದಿದ್ರು. ರಾಣಿ ಚೆನ್ನಮ್ಮ ಪಡೆ, ಮಹಿಳಾ ಪೊಲೀಸರು ಕುಡಿದು ಪ್ರಜ್ಞೆ ತಪ್ಪಿ ಬಿದ್ದ ಯುವತಿಯರನ್ನು ಪೊಲೀಸ್ ಚೌಕಿಗಳಲ್ಲಿ ಬಿಟ್ಟು ಕಂಟ್ರೋಲ್ ಮಾಡಿದ್ರು.
ಇನ್ನೊಂದೆಡೆ ಯುವತಿಯನ್ನು ಚುಡಾಯಿಸಿದ್ದಕ್ಕೆ ಗಲಾಟೆ ನಡೀತು. ಬಳಿಕ ಪೊಲೀಸರು ಜನಜಂಗುಳಿಯನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಒಂದೆರಡು ಕಡೆ ಸಣ್ಣಪುಟ್ಟ ಗಲಾಟೆಗಳು ಹೊರತುಪಡಿಸಿ, ಉಳಿದಂತೆ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಯಶಸ್ವಿಯಾಗಿ ನಡೆದಿದೆ.
8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸಿಸಿಟಿವಿ ಕಣ್ಗಾವಲಿನಲ್ಲಿ ಭದ್ರತೆ ಕಲ್ಪಿಸಲಾಗಿತ್ತು. ಹಾಗಾಗಿ ಕೊರೊನಾ ರೂಪಾಂತರಿ ಆತಂಕದ ಮಧ್ಯೆ ಜನ ಸಂಭ್ರಮದಲ್ಲಿ ಮಿಂದೆದ್ದರು.
Follow us on Social media