ನವದೆಹಲಿ : ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಅಪರಾಧಿಗಳಿಗೆ ಇದೇ 20ರಂದು ಬೆಳಗಿನ ಜಾವ 5.30ಕ್ಕೆ ಮರಣದಂಡನೆ ಜಾರಿಯಾಗಲಿದೆ.
ಕಾನೂನಿನ ಮಾರ್ಗಗಳನ್ನು ಬಳಸಿಕೊಂಡು ಮೂರು ಬಾರಿ ನೇಣಿಗೇರುವುದರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನಾಲ್ವರು ಅಪರಾಧಿಗಳಿಗೆ ಮತ್ತೊಮ್ಮೆ ಡೆತ್ ವಾರಂಟ್ ಹೊರಡಿಸಲಾಗಿದೆ.
ನಿರ್ಭಯಾ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ನಾಲ್ವರೂ ಅಪರಾಧಿಗಳ ಎಲ್ಲಾ ಕಾನೂನು ಮಾರ್ಗಗಳೂ ಇದೀಗ ಮುಚ್ಚಿದಂತಾಗಿದ್ದು ವಿನಯ್ ಶರ್ಮಾ, ಪವನ್ ಗುಪ್ತಾ, ಮುಖೇಶ್ ಸಿಂಗ್ ಮತ್ತು ಅಕ್ಷಯ್ ಸಿಂಗ್ ಅವರನ್ನು ಮಾರ್ಚ್ 20ರ ಶುಕ್ರವಾರದಂದು ಬೆಳಿಗ್ಗೆ ಗಲ್ಲಿಗೇರಿಸುವಂತೆ ದೆಹಲಿ ನ್ಯಾಯಾಲಯ ಗುರುವಾರ ಹೊರಡಿಸಿರುವ ಹೊಸ ಡೆತ್ ವಾರಂಟ್ ನಲ್ಲಿ ತಿಹಾರ್ ಜೈಲಿನ ಅಧಿಕಾರಿಗಳಿಗೆ ಆದೇಶಿಸಿದೆ.
Source : UNI