ಬೆಂಗಳೂರು: ಬಹುಭಾಷಾ ನಟಿ ಪ್ರಿಯಾ ಆನಂದ್ ಅವರು ಮದುವೆ ಬಗ್ಗೆ ನೀಡಿರುವ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಗ್ರಾಸವಾಗಿದೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ನ ಸಂದರ್ಶನವೊಂದರಲ್ಲಿ ಮಾತನಾಡಿರುವ ಪ್ರಿಯಾ, ‘ನಾನು ನಿತ್ಯಾನಂದ ಸ್ವಾಮಿ ಅವರೊಂದಿಗೆ ಮದುವೆಯಾಗಬೇಕು ಎಂದು ಬಯಸುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ನಿತ್ಯಾನಂದನ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ಆದರೂ ಅವರನ್ನು ಹಿಂಬಾಲಿಸುವ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿತ್ಯಾನಂದನ ಹೇಳಿಕೆಗಳನ್ನು ನಟಿ ಪ್ರಿಯಾ ಆನಂದ್ ಕೂಡ ಹಾಗಾಗೇ ಹಂಚಿಕೊಂಡಿದ್ದರು. ಈ ಕುರಿತು ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಾನು ನಿತ್ಯಾನಂದ ಅವರನ್ನು ಮದುವೆಯಾಗಲು ಬಯಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.ನಿತ್ಯಾನಂದ ವಿರುದ್ಧ ಹಲವು ಆರೋಪಗಳಿರಬಹುದು. ಆದರೆ, ಅವರನ್ನು ಅನೇಕರು ಇಷ್ಟಪಡುತ್ತಾರೆ. ಹಾಗಾದರೇ ಅವರಲ್ಲಿ ಏನಾದರೂ ವಿಶೇಷ ಗುಣ ಇರಬೇಕಾಲ್ಲವೇ ಎಂದು ಪ್ರಶ್ನಿಸಿರುವ ಪ್ರಿಯಾ, ನಾನು ಅವರೊಂದಿಗೆ ಮದುವೆಯಾದರೆ ಸರ್‌ನೇಮ್ ಕೂಡ ಬದಲಾಯಿಸಬೇಕಾಗಿಲ್ಲ. ನಮ್ಮಿಬ್ಬರ ಹೆಸರು ಒಂದೇ ರೀತಿ ಇದೆ’ ಎಂದು ಚಟಾಕಿ ಹಾರಿಸಿದ್ದಾರೆ. ಪ್ರಿಯಾ ಆನಂದ್ ಅವರ ಈ ಕಾಮೆಂಟ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಆಕೆ ಜೋಕ್ ಹೇಳುತ್ತಿದ್ದಾರೆ ಎಂದು ಹಲವರು ಹೇಳುತ್ತಿದ್ದರೂ ಪ್ರಿಯಾ ಆನಂದ್ ಮಾತ್ರ ಇನ್ನೂ ಸ್ಪಷ್ಟನೆ ನೀಡಿಲ್ಲ.
Follow us on Social media