ಬೆಂಗಳೂರು: ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ದಂಪತಿ ಪುತ್ರ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ-ರೇವತಿ ವಿವಾಹ ಕುಟುಂಬದವರು ನಿಶ್ಚಯಿಸಿದಂತೆ ಇದೇ ಏ.17ರಂದು ಸರಳವಾಗಿ ಜರುಗಲಿದೆ.
ನಿಖಿಲ್ – ರೇವತಿ ವಿವಾಹವನ್ನು ರಾಮನಗರದ ಜಾನಪದ ಲೋಕದ ಬಳಿ ನಡೆಸಲು ಈ ಹಿಂದೆ ನಿಶ್ಚಯಲಾಗಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಈಗ ರಾಮನಗರ ಸಮೀಪದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ ಡಿ ಕುಮಾರಸ್ವಾಮಿ, ನಿಖಿಲ್ ಗೌಡ ಹಾಗು ರೇವತಿ ಅವರ ವಿವಾಹ ಕುಟುಂಬದವರು ನಿಶ್ಚಯಿಸಿದಂತೆ ಇದೇ 17 ರಂದು ನಡೆಯಲಿದೆ. ವಿವಾಹಕ್ಕೆ ಎಲ್ಲರೂ ತಾವೆಲ್ಲರೂ ತಾವಿದ್ದ ಸ್ಥಳದಿಂದಲೆ ವಧು- ವರರನ್ನು ಆಶೀರ್ವಾದ ಮಾಡಬೇಕು. ಕೊರೋನಾ ಪಿಡುಗು ಮರೆಯಾದ ಮೇಲೆ ತಮ್ಮೆಲ್ಲರ ಆಶೀರ್ವಾದಕ್ಕಾಗಿ ದಂಪತಿಗಳು ಬರಲಿದ್ದಾರೆ. ನಮ್ಮಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ ಆರೋಗ್ಯ ಸಮಾಜ ಮುಖ್ಯ. ಆದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
Follow us on Social media