ನವದೆಹಲಿ : ಕಾಂಗ್ರೆಸ್‌ನ ಉನ್ನತ ನಾಯಕರು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರರಿಕ್ರಿಯೆ ನೀಡಿದ್ದು ‘ನಾನು ಕೆಳಗಿಳಿಯುತ್ತೇನೆ, ಹೊಸ ಅಧ್ಯಕ್ಷರನ್ನು ನೇಮಿಸಿ ಎಂದು ಹೇಳಿದ್ದಾರೆ. ಹಾಗೆಯೇ ಮತ್ತೊಮ್ಮೆ ಪಕ್ಷದ ನೇತೃತ್ವವನ್ನು ವಹಿಸುವ ಆಸಕ್ತಿಯನ್ನು ನಾನು ಹೊಂದಿಲ್ಲ ಎಂದು ತಿಳಿಸಿದ್ದಾರೆ.
ಆಗಸ್ಟ್ 24 ಸೋಮವಾರ ನಡೆಯಲಿರುವ ಆಂತರಿಕ ಸಭೆಯಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸ್ಥಾನದಿಂದ ಕೆಳಗಿಳಿಯುವುದಾಗಿ ಸೋನಿಯಾ ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಸೋನಿಯಾ ಗಾಂಧಿ ಅವರು ಹಂಗಾಮಿ ಅಧ್ಯಕ್ಷೆಯಾಗಿ ಪಕ್ಷದ ನಾಯಕತ್ವವನ್ನು ವಹಿಸಿದ್ದರು.
ಇನ್ನು ಸೋನಿಯಾ ಗಾಂಧಿಯವರು ಪಕ್ಷದ ನಾಯಕರಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ನೂತನ ಅಧ್ಯಕ್ಷ ಸ್ಥಾನವನ್ನು ವಹಿಸುವವರು ಗಾಂಧಿ ಕುಟುಂಬದ ಹೊರಗಿನವರು ಆಗಿರಬೇಕು ಎಂದು ತಿಳಿಸಿದ್ದಾರೆ.
ಪಕ್ಷದ ಆಂತರಿಕ ಬಿಕ್ಕಟ್ಟಿನ ಬಗ್ಗೆ ಚರ್ಚಿಸುವ ಸಲುವಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಆಗಸ್ಟ್ 24 ರ ಸೋಮವಾರ ಸಭೆ ನಡೆಸುತ್ತಿದೆ. ಪಕ್ಷದ 23 ಉನ್ನತ ನಾಯಕರು ಸಹಿ ಹಾಕಿರುವ ಪತ್ರದೊಂದಿಗೆ, ಪಕ್ಷದೊಳಗಿನ ನಾಯಕತ್ವದ ವಿಷಯದ ಬಗ್ಗೆ ಚರ್ಚಿಸುವಂತೆ ಪತ್ರ ಬರೆಯಲಾಗಿತ್ತು. ಈ ಪತ್ರಕ್ಕೆ ಹಿರಿಯ ನಾಯಕರಾದ ಕಪಿಲ್ ಸಿಬಲ್, ಶಶಿ ತರೂರ್, ಗುಲಾಮ್ ನಬಿ ಆಜಾದ್, ಪೃಥ್ವಿರಾಜ್ ಮೊದಲಾದವರು ಸಹಿ ಹಾಕಿದ್ದಾರೆ.
Follow us on Social media