ಮಂಡ್ಯ: ಇಬ್ಬರು ಬಾಲಕರು ಮತ್ತು ಓರ್ವ ಯುವಕ ಸೇರಿದಂತೆ ಒಟ್ಟು ಮೂವರು ನೀರುಪಾಲಾಗಿರುವ ಘಟನೆ ನಾಗಮಂಗಲ ತಾಲ್ಲೂಕಿನ ದಡಗ ಮತ್ತು ಉಪ್ಪಾರಹಳ್ಳಿಯಲ್ಲಿಂದು ನಡೆದಿದೆ. ದಡಗ ಗ್ರಾಮದ ಮನು(೧೨) ಹಾಗೂ ಪುನೀತ್(೧೦) ಎಂಬ ಬಾಲಕರು ಮತ್ತು ಉಪ್ಪಾರಹಳ್ಳಿಯ ವಿಜಯ್ ಕುಮಾರ್(೨೫) ಮೃತ ದುರ್ದೈವಿಗಳು.
ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ದಡಗ ಕೆರೆಯಲ್ಲಿ ಹಸುಗಳಿಗೆ ನೀರು ಕುಡಿಸಲು ಹೋದ ವೇಳೆ ಮನು ಹಾಗೂ ಪುನೀತ್ ಇಬ್ಬರೂ ಒಟ್ಟಿಗೆ ಕಾಲು ಜಾರಿ ಕೆರೆಗೆ ಬಿದ್ದು ಇಬ್ಬರು ಸಾವನಪ್ಪಿದ್ದಾರೆ.
ಒಂದೇ ಗ್ರಾಮದ ಇಬ್ಬರು ಮಕ್ಕಳು ನೀರು ಪಾಲಾಗಿರುದರಿಂದ ಇಡೀ ಗ್ರಾಮವೇ ನೀರವ ಮೌನಕ್ಕೆ ಜಾರಿದೆ. ಮಕ್ಕಳನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಮೀನಿನಲ್ಲಿ ಕೆಲಸ ಮಾಡಲು ತೆರಳಿದ್ದ ವಿಜಯ್ ಕುಮಾರ್(೨೫) ಕೆಲಸ ಮುಗಿದ ಬಳಿಕ ವಾಪಸ್ಸಾಗುವಾಗ ಸಂಜೆ 5 ಗಂಟೆ ಸಮಯದಲ್ಲಿ ಮದಲಹಳ್ಳಿಯ ಕೆರೆಯಲ್ಲಿ ಕೈ ಕಾಲು ತೊಳೆಯಲು ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ನಾಗಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow us on Social media