ಬೆಂಗಳೂರು : ಕಾಯಕವೇ ಕೈಲಾಸ ಎಂಬ ಮಾತು ಅರ್ಚಕರ ವಿಷಯದಲ್ಲಿ ಅಕ್ಷರಶಃ ಸತ್ಯ, ತಿಂಗಳುಗಳಿಂದ ದೇವಾಲಯಗಳು ಬಂದ್ ಆಗಿರುವುದರಿಂದ ತಮ್ಮ ಜೀವನ ನಿರ್ವಹಣೆ ಕಷ್ಟವಾಗಿದೆ ಹೀಗಾಗಿ ಮತ್ತೆ ದೇವಾಲಯಗಳನ್ನು ಪುನಾರಂಭ ಮಾಡಬೇಕೆಂದು ಅರ್ಚಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಸುಮಾರು 34 ಸಾವಿರ ದೇವಾಲಯಗಳು ಒಳಪಟ್ಟಿದ್ದು, ಅದರಲ್ಲಿ ಎ ಗುಂಪಿನಲ್ಲಿ 175, ಬಿ ಗುಂಪಿನಲ್ಲಿ 158, ಉಳಿದವೆಲ್ಲಾ ಸಿ ಗುಂಪಿಗೆ ಸೇರಲಿವೆ. ಇನ್ನು ಹಲವು ದೇವಾಲಯಗಳನ್ನು ಟ್ರಸ್ಟ್ ಗಳು ಮತ್ತು ಸಂಘ ಸಂಸ್ಥೆಗಳು ನಡೆಸುತ್ತಿವೆ.
ಎ ಮತ್ತು ಬಿ ಗುಂಪಿನ ದೇವಾಲಯಗಳ ಅರ್ಚಕರಿಗೆ ತಿಂಗಳ ವೇತನ ಸಿಗಲಿದೆ,. ಆದರೆ ಸಿ ಗುಂಪಿನ ದೇವಾಲಯಗಳ ಅರ್ಚಕರು ದೇವಾಲಯಗಳಿಗೆ ಬರುವ ಭಕ್ತರು ನೀಡುವ ಕಾಣಿಕೆ ಮೇಲೆ ಅವರ ಆದಾಯ ಅವಲಂಬಿಸಿದೆ. ಹೀಗಾಗಿ ದೇವಾಲಯಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬೇರೆ ಎಲ್ಲಾ ವರ್ಗದ ಜನರಿಗೆ ಸಿಎಂ ಧನ ಸಹಾಯ ನೀಡಿದ್ದಾರೆ, ಆದರೆ ನಮೆ ಮಾತ್ರ ನೀಡಿಲ್ಲ ಎಂದು ಅರ್ಚಕರೊಬ್ಬರು ಅಳಲು ತೋಡಿಕೊಂಡಿದ್ದಾರೆ, ಆದರೆ ಸದ್ಯಕ್ಕೆ ದೇವಾಲಯ ತೆರೆಯುವ ನಿರ್ಧಾರ ಸರ್ಕಾರದ ಮುಂದಿಲ್ಲ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
Follow us on Social media