ಬೆಂಗಳೂರು : ”ನನ್ನ ಹೆಸರಿನಲ್ಲಿ ಯಾರೂ ಕೂಡಾ ಅಭಿಮಾನಿಗಳ ಸಂಘ, ಟ್ರಸ್ಟ್ ಹಾಗೂ ಇನ್ನಿತರ ಸಂಘಟನೆಗಳನ್ನು ನಡೆಸುವಂತಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.
ಈ ಕುರಿತು ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ”ಈಗಾಗಲೇ ಅಸ್ತಿತ್ವದಲ್ಲಿರುವ ಎಂ ಎಸ್ ಅಂಗಡಿ ನೇತೃತ್ವದ ಅಖಿಲ ಕರ್ನಾಟಕ ಡಿ.ಕೆ ಶಿವಕುಮಾರ್ ಅಭಿಮಾನಿಗಳ ಸಂಘ ಹೊರತಾಗಿ ಬೇರೆ ಯಾವುದೇ ಸಂಘ, ಟ್ರಸ್ಟ್ ಹಾಗೂ ಇನ್ನಿತರ ಸಂಘಟನೆಗಳನ್ನು ನನ್ನ ಹೆಸರಿನಲ್ಲಿ ಮಾಡಿಕೊಳ್ಳುವಂತಿಲ್ಲ. ಅಂತಹ ಅಭಿಮಾನಿ ಸಂಘ, ಸಂಸ್ಧೆಗಳನ್ನು ಕೂಡಲೇ ವಿಸರ್ಜಿಸಬೇಕು ಎಂದು ತಿಳಿಸಿದ್ದು ತನ್ನ ಹೆಸರಲ್ಲಿ ಹಾಗೂ ನನ್ನ ಸಹೋದರ ಡಿ ಕೆ ಸುರೇಶ್ ಹೆಸರಿನಲ್ಲಿ ಸಂಘ ಸಂಸ್ಥೆ ಮಾಡಿ ಚಟುವಟಿಕೆ ನಡೆಸಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದ್ದಾರೆ.
Follow us on Social media