ಬೆಂಗಳೂರು: ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಎಲ್ಲಾ 224 ಶಾಸಕರ ಅನೈತಿಕ ಸಂಬಂಧದ ಬಗ್ಗೆ ತನಿಖೆ ನಡೆಸಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ನೀಡಿದ್ದ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ಸುಧಾಕರ್ ಅವರು ರಾಜ್ಯದ ಜನರಿಗೆ ನುಡಿಮುತ್ತಗಳನ್ನು ಉದುರಿಸಿದ್ದಾರೆ, ತನಿಖೆ ನಡೆಯಲಿ ಬಿಡಿ, ಬಹಳ ಸಂತೋಷ ಎಂದು ಹೇಳಿದ್ದಾರೆ. ಇವರ ಹೇಳಿಕೆಯನ್ನು ವಿಧಾನಸಭೆಯಲ್ಲಿ ಚರ್ಚಿಸಬೇಕು, ಈ ವಿಚಾರವನ್ನು ನಮ್ಮ ನಾಯಕರ ಜೊತೆ ಮಾತನಾಡುತ್ತೇವೆ, ಸಾಮೂಹಿಕವಾದಂತ ವಿಚಾರ ಎಂದು ಹೇಳಿದ್ದಾರೆ.
ಇನ್ನೂ ಸುಧಾಕರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ನೂರಕ್ಕೆ ನೂರರಷ್ಚು ನಾನು ಏಕ ಪತ್ನಿ ವ್ರತಸ್ಥ ಎಂದು ಹೇಳಿದ್ದಾರೆ.
ಇಂದು ಬೆಳಿಗ್ಗೆ ನಾನು ವಿಶೇಷವಾಗಿ ಸದನಲ್ಲಿ ಕೂಡ ಹೇಳಬೇಕು ಅಂದುಕೊಂಡಿದ್ದೆ. ಯಾರಿವತ್ತು ಬಹಳ ಮರ್ಯಾದಾ ಪುರುಷರು, ಶ್ರೀರಾಮಚಂದ್ರರು ಅಂತ ಕಾಂಗ್ರೆಸ್ ನ ನಾಯಕರುಗಳು, ಜೆಡಿಎಸ್ ನ ನಾಯಕರುಗಳು ಯಾರೆಲ್ಲಾ ವಿರೋಧ ಪಕ್ಷದ ನಾಯಕರುಗಳು ಮಾತನಾಡುತ್ತಾ ಇದ್ದಾರೆ, ಅವರಿಗೆ ಒಂದು ಸವಾಲ್ ಹಾಕುತ್ತೇನೆ.
225 ಜನ ಕೂಡ ತನಿಖೆಗೆ ಒಳಪಡಲಿ. ನಿಮ್ಮ ನಿಮ್ಮ ಜೀವನದಲ್ಲಿ ಯಾರು ಅನೈತಿಕ ಸಂಬಂಧ ಇಟ್ಟುಕೊಂಡಿಲ್ಲ ಎಂದು ಫ್ರೂವ್ ಆಗಲಿ ಎಂದು ಹೇಳಿದ್ದರು. ನನ್ನನ್ನು ಸೇರಿ ಆಗಲಿ, ಇದು ನೈತಿಕತೆ, ಮೌಲ್ಯಗಳ ಪ್ರಶ್ನೆ ಎಂದು ಹೇಳಿದ್ದರು.
Follow us on Social media