Breaking News

ನಕಲಿ ದಾಖಲೆ ಸೃಷ್ಟಿಸಿ ಚುನಾವಣೆಗೆ ಸ್ಪರ್ಧೆ: ಮಾಜಿ ಸಚಿವ ಪಿ.ಟಿ. ಪರೇಮಶ್ವರ್ ನಾಯಕ್ ಪುತ್ರನ ವಿರುದ್ಧ ಪ್ರಕರಣ ದಾಖಲು

ಹರಪನಹಳ್ಳಿ: ಜನ್ಮ ದಿನಾಂಕ ಸಂಬಂಧ ಶಾಲಾ ದಾಖಲೆಗಳನ್ನು ತಿದ್ದುಪಡಿ ಮಾಡಿದ ಆರೋಪದ ಮೇಲೆ ಮಾಜಿ ಸಚಿವ, ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಮತ್ತು ಅವರ ಪುತ್ರ ಲಕ್ಷೀಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಟಿ.ಭರತ್ ವಿರುದ್ದ ಹರಪ್ಪನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ. 

2016 ಮಾರ್ಚ್ 4ರಂದು ತಾಲೂಕು ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ರೇವನಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರನ್ನು ಪರಿಶೀಲಿಸಿದ ಡಿವೈಎಸ್ಪಿ ಅರ್ಜಿಯ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿ 2016 ಜುಲೈ 7ರಂದು ಬೆಂಗಳೂರಿನ ಮಡಿವಾಳದಲ್ಲಿನ ಎಫ್‌ಎಸ್‌ಎಲ್ ತಜ್ಞರಿಗೆ ರವಾನಿಸಿದ್ದರು.

2020 ಜುಲೈ 27, 2020ರಂದು ತಜ್ಞರು ದಾಖಲೆಗಳ ವರದಿ ನೀಡಿದ್ದು, ಅರ್ಜಿದಾರರಾದ ಡಿ.ಲಿಂಬ್ಯಾನಾಯ್ಕ ಅವರು ನೀಡಿರುವ ಮಾಹಿತಿ ಮತ್ತು ದಾಖಲೆಗಳ ಅಧಾರದಲ್ಲಿ ನಕಲಿ ದಾಖಲೆ ಸೃಷ್ಠಿಸಿ ಗ್ರಾಮ ಪಂಚಾಯತ್ ಚುನಾವಣೆ ಸ್ಪರ್ಧಿಸಿರುವ ಸಂಬಂಧ ಮೋಸ, ವಂಚನೆ ಪ್ರಕರಣ ದಾಖಲಿಸಲಾಗಿದೆ.

ಪಿ.ಟಿ.ಭರತ್ ತಾಯಿ ಪ್ರೇಮಕ್ಕ ಅವರು 1994 ನವೆಂಬರ್ 7ರಂದು ದಾವಣಗೆರೆಯ ಚಿಗಟೇರಿ ಆಸ್ಪತ್ರೆಯಲ್ಲಿ ಭರತ್ ಅವರಿಗೆ ಜನ್ಮ ನೀಡಿದ್ದು,ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯ ಜನನ ದಿನಾಂಕ ನೋಂದಣಿ ಅಧಿಕಾರಿಗಳು ಆಸ್ಪತ್ರೆ ಮಾಹಿತಿ ಅಧರಿಸಿ ಜನನ ದೃಢೀಕರಣ ಕೊಟ್ಟಿರುತ್ತಾರೆ.ಅದೇ ಪ್ರಕಾರ ಪಿ.ಟಿ.ಭರತ್ ಆರ್‌ಎಸ್‌ಎನ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ ದಾಖಲಿಸಿದ್ದಾರೆ.ಪ್ರಾಥಮಿಕ ವಿದ್ಯಾಭಾಸದ ಬಳಿಕ ತೋಳಹುಣಸಿ ಶಾಲೆಯಲ್ಲಿ ಜನನ ದಿನಾಂಕ ನೊಂದಣಿ ಮಾಡಿಕೊಂಡಿರುತ್ತಾರೆ.

ಹರಪನಹಳ್ಳಿ ತಾಲ್ಲೂಕು ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಮಯದಲ್ಲಿ ಭರತ್ ಅವರ ಜನ್ಮ ದಿನಾಂಕ ಪ್ರಕಾರ 21 ವರ್ಷಕ್ಕಿಂತ ಕಡಿಮೆ ವಯಸ್ಸು ಇದ್ದ ಕಾರಣ ಸಚಿವರಾಗಿದ್ದ ಪರಮೇಶ್ವರನಾಯ್ಕ ಶಾಲಾ ಮುಖ್ಯೋಧ್ಯಾಯರ ಮೇಲೆ ಪ್ರಭಾವ ಬೀರಿ ಜನ್ಮ ದಿನಾಂಕ ತಿಂಗಳಲ್ಲಿ 11 ಇರುವುದನ್ನು 1 ಎಂದು ನಮೂದಿಸಿ 21 ವರ್ಷ ವಯಸ್ಸಿನ ನಕಲಿ ದಾಖಲೆ ಸೃಷ್ಠಿಸಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುತ್ತಾರೆಂದು ದೂರಿನಲ್ಲಿ ಆರೋಪಿಸ ಲಾಗಿದೆ.ಅಲ್ಲದೆ ಭರತ್ ಚುನಾವಣೆಯಲ್ಲಿ ಗೆದ್ದು ಲಕ್ಷ್ಮೀಪುರ ಗ್ರಾ.ಪಂ ಅಧ್ಯಕ್ಷರಾಗಿ ಆಯ್ಕೆಯಾಗಿ ರುತ್ತಾರೆ.ಈ ಅಧಿಕಾರ ದುರ್ಬಳ ಕೆ,ನಕಲಿ ದಾಖಲೆ ಸೃಷ್ಟಿ,ಮೋಸ ಮತ್ತು ವಂಚನೆ ಎಸಗಿ ಅಧಿಕಾರಕ್ಕೇರಿದ ಆರೋಪ ಸಂಬಂಧ ರೇವನಗೌಡ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭರತ್ ಮತ್ತು ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್ ಹಾಗೂ ಶಾಲಾ ಮುಖ್ಯೋಪಾಧ್ಯಾಯರಿಗೆ ಪೊಲೀಸರು ಸೂಚಿಸಿದ್ದಾರೆ.ಆದರೆ ಭರತ್ ನಾಪತ್ತೆಯಾಗಿದ್ದು ಪರಮೇಶ್ವರ್ ನಾಯಕ್ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×