ಪೊಗರು ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಎರಡು ವರ್ಷದ ಮೇಲಾಗಿದೆ. ಸಿನಿಮಾ ಯಾವಾಗ ತೆರೆಗೆ ಬರುತ್ತೆ ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೊರ ಬಿದ್ದಿದೆ.
ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷೆಯ ಪೊಗರು ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರಲಿದೆ.
ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಯಾವಾಗ ಎನ್ನುವುದು ಬಹಿರಂಗವಾಗಿಲ್ಲ. ಸದ್ಯ 24ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಸದ್ಯ ಕೊನೆ ಹಂತದ ಚಿತ್ರೀಕರಣದಲ್ಲಿರುವ ಪೊಗರು ಸಿನಿಮಾ, ರಿಲೀಸ್ ಗೂ ತಯಾರಿ ಮಾಡಿಕೊಳ್ಳುತ್ತಿದೆ. ಅಂದ್ಹಾಗೆ ಸಿನಿಮಾ ಸೆನ್ಸಾರ್ ಆದಮೇಲೆ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಮಾಡಲಿದೆಯಂತೆ ಚಿತ್ರತಂಡ. ಸಧ್ಯದಲ್ಲೇ ಚಿತ್ರೀಕರಣ ಮುಗಿಸಿ ಪೊಗರು ಸೆನ್ಸಾರ್ ಪರೀಕ್ಷೆಗೆ ಹೋಗಲಿದೆ.
Follow us on Social media