ಧಾರವಾಡ : ಮಂಗಳೂರು ಮತ್ತು ಕಾಸರಗೋಡಿನಿಂದ 74 ವಲಸೆ ಕಾರ್ಮಿಕರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಗದಗ ಪೋಲೀಸರು ವಶಪಡಿಸಿಕೊಂಡಿದ್ದಾರೆ
ಈ ಟ್ರಕ್‌ಗಳಲ್ಲಿ 27 ವಲಸೆ ಕಾರ್ಮಿಕರು ಕಾಸರಗೋಡಿನವರಾದರೆ 47 ಮಂದಿ ಮಂಗಳೂರಿನಿಂದ ಬಂದಿದ್ದರು. ಅವರನ್ನು ರಾಜಾಸ್ಥಾನಕ್ಕೆ ಕರೆದೊಯ್ಯಲಾಗುತ್ತಿತ್ತು. ಗದಗ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿ ಪರಿಶೀಲಿಸಿದಾಗ, ಲಾರಿಗಳು ಜನರನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ನೋಂದಣಿ ಸಂಖ್ಯೆ RJ 14 BJ 2909 ಮತ್ತು HR 46 CS 703 ಟ್ರಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅವರು ಧಾರವಾಡದ ಪಟ್ಟಣಶೆಟ್ತಿ ಮದುವೆ ಮಂಟಪದಲ್ಲಿ ವಲಸೆ ಕಾರ್ಮಿಕರ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಎರಡೂ ಟ್ರಕ್ ಚಾಲಕರ ವಿರುದ್ಧ ದೂರು ದಾಖಲಿಸಲಾಗಿದೆ. ಎಲ್ಲ ಕಾರ್ಮಿಕರನ್ನು ರಾಜಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ತಿಳಿಸಿದ್ದಾರೆ.
Follow us on Social media