ಮಂಗಳೂರು :ದ.ಕ ಜಿಲ್ಲೆಯಲ್ಲಿ ಮತ್ತೆ ಮೂರು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು 28 ಪ್ರಕರಣ ಪತ್ತೆಯಾದಂತಾಗಿದೆ.
ಫಸ್ಟ್ ನ್ಯೂರೋ ಆಸ್ಪತ್ರೆ ಯ ಸಂಪರ್ಕ ಹೊಂದಿದ್ದ P-536 ಮಹಿಳೆಯಿಂದ ಇಬ್ಬರಿಗೆ ಸೋಂಕು ಹರಡಿರುವುದು ಖಚಿತವಾಗಿದೆ. ಬೋಳಾರ ನಿವಾಸಿಗಳಾದ 38 ವರ್ಷದ ಮಹಿಳೆ ಹಾಗೂ 11 ವರ್ಷದ ಸೋಂಕು ಇರುವುದು ದೃಢಪಟ್ಟಿದೆ.
ಬಂಟ್ವಾಳದ ಪಿ – 360 ರ ಸಂಪರ್ಕದಲ್ಲಿದ್ದ 16 ವರ್ಷದ ಬಾಲಕಿಗೂ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಬಾಲಕಿಯನ್ನು ಎನ್, ಐ ಟಿ ಕೆ ಯಲ್ಲಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಇವರ 12 ನೇ ದಿನದ ಗಂಟಲು ದ್ರವದ ವರದಿ ಬಂದಿದ್ದು ಅದರಲ್ಲಿ ಸೊಂಕು ಇರುವುದು ಖಚಿತವಾಗಿದೆ.
Follow us on Social media