ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ, ಅಧಿಕೃತವಾಗಿ ಘೋಷಣೆಗೆ ಮುನ್ನವೇ ವೆಬ್ ಸೈಟ್ ನಲ್ಲಿ ಪ್ರಕಟವಾಗಿದೆ.
ಎಂದಿನಂತೆ ಈ ಬಾರಿಯೂ ಉಡುಪಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಕ್ರಮವಾಗಿ ದ್ವಿತೀಯ ಸ್ಥಾನ, ದಕ್ಷಿಣ ಕನ್ನಡ ತೃತೀಯ ಸ್ಥಾನ ಕೊಡಗು ಪಡೆದುಕೊಂಡಿದೆ.
ವಿದ್ಯಾರ್ಥಿಗಳು www.karresults.nic.in ಲಿಂಕ್ ಬಳಸಿ ತಮ್ಮ ಫಲಿತಾಂಶವನ್ನು ನೋಡಬಹುದು. ವಿದ್ಯಾರ್ಥಿಗಳ ಮೊಬೈಲ್‌ಗೆ ಈಗಾಗಲೇ ಎಸ್‌ಎಂಎಸ್ ಮೂಲಕ ಫಲಿತಾಂಶ ಬಂದಿದೆ ಎಂದು ವರದಿಯಾಗಿದೆ.
ಮಾ.4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿತ್ತು. ಕೋವಿಡ್ 19 ಹಿನ್ನೆಲೆಯಲ್ಲಿ ಮಾ.23ರ ಇಂಗ್ಲಿಷ್ ಪರೀಕ್ಷೆ ಮುಂದೂಡಲಾಗಿತ್ತು. ಜೂ. 18ರಂದು ಈ ಪರೀಕ್ಷೆಯನ್ನು ಎಲ್ಲ ಸುರಕ್ಷಾ ಕ್ರಮಗಳೊಂದಿಗೆ ನಡೆಸಲಾಗಿತ್ತು. ಇಂದು ಫಲಿತಾಂಶ ಹೊರಬಿದ್ದಿದೆ.
ಉಡುಪಿ: 90.71, ದ.ಕ: 90.71, ಕೊಡಗು: 81.53 ಫಲಿತಾಂಶ ಪಡೆದರೆ ವಿಜಯಪುರ 54.22 ಸ್ಥಾನ ಪಡೆದು ಕೊನೆಯ ಸ್ಥಾನದಲ್ಲಿದೆ.
Follow us on Social media