ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 20 ಲಕ್ಷ ಗಡಿ ದಾಟುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಟ್ವಟರ್ ಖಾತೆಯಲ್ಲಿ ಈ ಹಿಂದಿನ ಟ್ವೀಟ್ ಗಳನ್ನು ಪುನರುಚ್ಚರಿಸಿರುವ ರಾಹುಲ್ ಗಾಂಧಿ, ಜುಲೈ 17 ರಂದು 10 ಲಕ್ಷ ದಾಟಿದ ಕೋವಿಡ್-19 ಪ್ರಕರಣಗಳು ಆಗಸ್ಟ್ 10 ರೊಳಗೆ 20 ಲಕ್ಷ ದಾಟಿದೆ. ಈ ಸಾಂಕ್ರಾಮಿಕ ರೋಗ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 20 ಲಕ್ಷ ಗಡಿ ದಾಟಿದ್ದು, ಮೋದಿ ಸರ್ಕಾರ ನಾಪತ್ತೆಯಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Follow us on Social media