ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, 24 ಗಂಟೆಗಳಲ್ಲಿ ಸೋಂಕಿತರ ಸಂಖ್ಯೆ 19,984ಕ್ಕೆ ಏರಿಕೆಯಾಗಿದೆ. ಅಲ್ಲದೆ, ವೈರಸ್’ಗೆ ಹೊಸದಾಗಿ 50 ಮಂದಿ ಬಲಿಯಾಗಿದ್ದಾರೆ.
ಮಂಗಳವಾರ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟಾರಯಾಗಿ 1545 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 19,984ಕ್ಕೆ ತಲುಪಿದೆ. ಅಲ್ಲದೆ, ಸಾವಿನ ಸಂಖ್ಯೆ 640ಕ್ಕೆ ಏರಿಕೆಯಾಗಿದೆ.
ದೇಶದಲ್ಲಿಯೇ ಅತೀ ಹೆಚ್ಚು ಸೋಂಕು ಪತ್ತೆಯಾಗಿರುವ ಮಹಾರಾಷ್ಟ್ರ ರಾಜ್ಯದಲ್ಲಿ ಅದೇ ರೀತಿಯ ಬೆಳವಣಿಗೆ ಮುಂದುವರೆದಿದೆ. ನಿನ್ನೆ ಮಹಾರಾಷ್ಟ್ರದಲ್ಲಿ ಹೊಸದಾಗಿ 552 ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖಅಯೆ 5218ಕ್ಕೆ ತಲುಪಿದೆ. ರಾಜ್ಯದಲ್ಲಿ ಒಟ್ಟು 251 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ ಮುಂಬೈ ಒಂದರಲ್ಲಿಯೇ 3445 ಕೇಸು ದಾಖಲಾಗಿದ್ದು, 150 ಜನ ಸಾವನ್ನಪ್ಪಿದ್ದಾರೆ. ಇನ್ನು ಗುಜರಾತ್ ನಲ್ಲಿ 239 ಹೊಸ ಪ್ರಕರಣ ದೃಢಪಟ್ಟಿದೆ.
ಈ ನಡುವೆ ದೇಶದಲ್ಲಿ ಈ ವರೆಗೆ 4.49 ಲಕ್ಷ ಜನರ ಮಾದರಹಿ ಪರೀಕ್ಷಿಸಲಾಗಿದೆ. ಕರ್ನಾಟಕದ ಕೊಡಗು ಸೇರಿದಂತೆ ದೇಶದ 4 ರಾಜ್ಯಗಳಲ್ಲಿ ಕಳೆದ 28 ದಿನಗಳಿಂದ ಹೊಸ ಪ್ರಕರಣ ದಾಖಲಾಗಿಲ್ಲ. 23 ರಾಜ್ಯಗಳ 61 ಜಿಲ್ಲೆಗಲಲ್ಲಿ 14 ದಿನಗಳಲ್ಲಿ ಹೊಸ ಕೇಸು ದಾಖಲಾಗಿಲ್ಲ. ಭಾರತದಲ್ಲಿ ಈ ವವರೆಗೆ ಸೋಂಕಿತರ ಪೈಕಿ ಶೇ.17.48 ರಷ್ಟು ಜನ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
Follow us on Social media