ನವದೆಹಲಿ: ಪಶ್ಚಿಮ ದೆಹಲಿಯ ಖಾಸಗಿ ಆಸ್ಪತ್ರೆಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಭಾನುವಾರ ಕೊರೋನಾದಿಂದ ಸಾವನ್ನಪ್ಪಿದ್ದಾರೆ.
ಕೇರಳ ಮೂಲದ ಈಕೆ ಪಶ್ಚಿಮ ದೆಹಲಿಯ ಕೀರ್ತಿನಗರದಲ್ಲಿರುವ ಕಾರ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ಕೆಲ ದಿನಗಳಿಂದ ನರ್ಸ್ ಕೆಲಸಕ್ಕೆ ಹಾಜರಾಗಿರಲಿಲ್ಲ, ಈ ಸಂಬಂಧ ಆಸ್ಪತ್ರೆ ಆಡಳಿತ ಮಂಡಳಿ ಆಕೆಯ ಬಗ್ಗೆ ವಿಚಾರಿಸಿದಾಗ ಕೊರೋನಾಗೆ ಬಲಿಯಾಗಿರುವುದು ತಿಳಿದು ಬಂದಿದೆ.
ಆಸ್ಪತ್ರೆಯ ಹೊರಗಿನ ಕ್ಲಿನಿಕ್ ನಲ್ಲಿ ರೋಗಿಗಳನ್ನು ಪರೀಕ್ಷಿಸಲಾಗುತ್ತದೆ ಹಾಗೂ ಜ್ವರವಿಲ್ಲದವರಿಗೆ ಮಾತ್ರ ಆಸ್ಪತ್ರೆ ಪ್ರವೇಶಿಸಲು ಅವಕಾಶವಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಇನ್ನೂ ನರ್ಸ್ ನಿಧನಕ್ಕೆ ಕೇರಳ ನರ್ಸ್ ಅಸೋಸಿಯೇಷನ್ ಸಂತಾಪ ಸೂಚಿಸಿದೆ.
Follow us on Social media