Breaking News

ದೆಹಲಿಯಿಂದ ಹಿಂತಿರುಗಿದ್ದ ಉಪ್ಪಿನಂಗಡಿಯ ಯುವಕನಿಗೆ ಕೊರೊನಾ ಸೋಂಕು ದೃಢ

ಮಂಗಳೂರು : ದೆಹಲಿಯಿಂದ ಹಿಂತಿರುಗಿದ್ದಉಪ್ಪಿನಂಗಡಿಯ ಯುವಕನಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

ಕಳೆದ ಕೆಲವು ದಿನಗಳಿಂದ ಯಾವುದೇ ಕೊರೊನಾ ಪ್ರಕರಣಗಳಿಲ್ಲದೆ ನಿರಾಳವಾಗಿದ್ದ ದ.ಕ ಜನತೆಯಲ್ಲಿ ಈ ಪ್ರಕರಣ ಮತ್ತೆ ಆತಂಕಕ್ಕೆ ದೂಡಿದೆ.ಮಾ.28 ದೆಹಲಿಯಿಂದ ಹಿಂತಿರುಗಿದ್ದ  39 ವರ್ಷದ ಯುವಕನನ್ನು 14 ದಿನಗಳ ಕಾಲ ಕ್ವಾರೆಂಟೈನ್ ನಲ್ಲಿ ಇಡಲಾಗಿತ್ತು. ಏ.2 ರಂದು ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಇತನ ವರದಿ ನೆಗೆಟಿವ್ ಬಂದಿದ್ದು, ಆ ಬಳಿಕ ಏ.13ರಂದು ಕಳುಹಿಸಿದ ಎರಡನೇ ಮಾದರಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ ತಕ್ಷಣ ಯುವಕನನ್ನು ವೆನ್ ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 13 ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದ್ದು, ಈ ಪೈಕಿ 9 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Follow us on Social media

About the author

×

Hello!

If you want to receive regular new updates, please click whatsapp icon and save our number on your phone. You will be getting regular news updates on WhatsApp.

×