ದಾವಣಗೆರೆ: ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರ ಪುತ್ರ ಪ್ರಶಾಂತ್ ಶೆಟ್ಟರ್ ಅವರ ಕಾರು ಮಂಗಳವಾರ ಅಪಘಾತಕ್ಕೀಡಾಗಿದೆ.
ಹಳೇ ಕುಂದುವಾಡ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಅಪಘಾತ ನಡೆದಿದ್ದು, ಘಟನೆಯಲ್ಲಿ ಸಚಿವರ ಪ್ರಶಾಂತ್ ಶೆಟ್ಟರ್ ಹಾಗೂ ಅವರ ಪತ್ನಿ ಅಂಚಲ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಬಳಿ ಕೆಎ 05, ಎಆರ್ 6577 ನಂಬರ್ ನ ಲಾರಿ ಹಾಗೂ ಶೆಟ್ಟರ್ ಪುತ್ರನ ಕೆಎ 03 ಎನ್ ಇ 8 ನಂಬರ್ ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ಪ್ರಶಾಂತ್ ಶೆಟ್ಟರ್ ಅವರು ಇಂದು ದಾವಣಗೆರೆಯಿಂದ ಹುಬ್ಬಳ್ಳಿ ನಿವಾಸಕ್ಕೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಸ್ಥಳಕ್ಕೆ ದಕ್ಷಿಣ ಸಂಚಾರ ಪೊಲೀಸ್ ಠಾಣೆ ಪಿಎಸ್ಐ ಕಿರಣ್ ಕುಮಾರ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.
Follow us on Social media