ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲ್ಲೇ ಇದ್ದು ಇಂದು ಮತ್ತೆ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಬಂದ 35 ವರ್ಷದ ಓರ್ವ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಆಗಿದ್ದು ಕೊರೊನಾ ದೃಢಪಟ್ಟಿರುವ ಇನ್ನೋರ್ವ 31 ವರ್ಷದ ಪುರುಷನ ಕೊರೊನಾ ಮೂಲ ಪತ್ತೆಹಚ್ಚಲಾಗುತ್ತಿದೆ.
31 ವರ್ಷದ ಪುರುಷ P1094 ಜಪ್ಪಿನಮೊಗರು ನಿವಾಸಿಯಾಗಿದ್ದು ಕೊರೊನಾ ಶಂಕೆಯಿಂದಾಗಿ ಆಸ್ಪತ್ರೆಗೆ ಬಂದು ಸ್ವಯಂ ಆಗಿ ಪರೀಕ್ಷೆ ಮಾಡಿಸಿಕೊಂಡಿದ್ದು ವರದಿಯಲ್ಲಿ ಕೊರೊನಾ ಪಾಸಿಟಿವ್ ಆಗಿದೆ.
P1095 35 ವರ್ಷದ ಮಹಿಳೆ ನಗರದ ಯೆಯ್ಯಾಡಿ ನಿವಾಸಿಯಾಗಿದ್ದು ಮೇ 14 ರಂದು ಮುಂಬೈನಿಂದ ಬಂದಿದ್ದು ಆಕೆಯ ಪತಿ ಮತ್ತು ಮಗು ಕ್ವಾರಂಟೈನ್‌ನಲ್ಲಿದ್ದರು.
Follow us on Social media