ಮಂಗಳೂರು : ನಾಳೆಯಿಂದ ಮದ್ಯ ಮಾರಾಟಕ್ಕೆ ಅನುಮತಿ ಹಿನ್ನಲೆ ದ.ಕ ಜಿಲ್ಲಾಡಳಿತ ಮದ್ಯ ಮಾರಾಟಕ್ಕೆ ಷರತ್ತಿನ ಅನುಮತಿ ನೀಡಿದೆ.
ಮದ್ಯದಂಗಡಿ ಬೆಳಗ್ಗೆ 9 ರಿಂದ ಸಂಜೆ 7ರ ವರೆಗೆ ಮಾತ್ರ ತೆರೆದಿರಬೇಕು. ವೈನ್ ಶಾಪ್‌ಗಳಿಗೆ ಮೂವರಿಗೆ ಮಾತ್ರ ಹೋಗಲು ಅವಕಾಶವಿದ್ದು, ಮದ್ಯ ಮಳಿಗೆಯ ಒಳಗೆ ಐವರು ಹಾಗೂ ಹೊರಗೆ ಐವರು ಗ್ರಾಹಕರಿಗೆ ಅವಕಾಶ ನೀಡಲಾಗಿದೆ.
ಅಂಗಡಿ ಮುಂದೆ ಬ್ಯಾರಿಕೇಡ್ ಅಳವಡಿಸಿ, ಕಾವಲು ಹಾಕಬೇಕು ಹಾಗೂ ಇಬ್ಬರು ಭದ್ರತಾ ಸಿಬ್ಬಂದಿಗಳಿಗೆ ಅಳವಡಿಸಲು ಸೂಚನೆ ನೀಡಲಾಗಿದೆ.ಗ್ರಾಹಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಹಾಕರಬೇಕು.
ಮದ್ಯದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ಮದ್ಯದಂಗಡಿ ಮಾಲೀಕರಿಗೆ ಸೂಚನೆ ನೀಡಿದ್ದಾರೆ.
Follow us on Social media