ನವದೆಹಲಿ: ತ್ರಿವಳಿ ತಲಾಖ್ ರದ್ದು ಕಾನೂನು ಜಾರಿಗೆ ಬಂದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮೂವರು ಸಚಿವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತ್ರಿವಳಿ ತಲಾಖ್ ನಿಷೇಧ ಕಾನೂನನ್ನು 1980ರಲ್ಲಿಯೇ ತರಬಹುದಾಗಿತ್ತು. ಆದರೆ ಕಾಂಗ್ರೆಸ್ ವ ವೋಟ್ ಬ್ಯಾಂಕ್ ರಾಜಕಾರಣದಿಂದ ರಾಜಕೀಯ ನಾಯಕರು ಅದನ್ನು ತರಲು ಮನಸ್ಸು ಮಾಡಲಿಲ್ಲ ಎಂದು ಆರೋಪಿಸಿದರು.
ನಿನ್ನೆ ದೇಶದ ಹಲವು ಭಾಗಗಧಲ್ಲಿ ವಿಡಿಯೊ ಲಿಂಕ್ ಮೂಲಕ ಮುಸಲ್ಮಾನ ಮಹಿಳೆಯರೊಂದಿಗೆ ಸಂವಾದ ನಡೆಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಸಚಿವರಾದ ರವಿ ಶಂಕರ್ ಪ್ರಸಾದ್ ಮತ್ತು ಮುಕ್ತಾರ್ ಅಬ್ಬಾಸ್ ನಖ್ವಿ ತ್ರಿವಳಿ ತಲಾಖ್ ನಿಂದ ಮುಸ್ಲಿಂ ಮಹಿಳೆಯರಿಗೆ ಆಗುತ್ತಿದ್ದ ಅನ್ಯಾಯ ಮತ್ತು ಅದರ ನಿಷೇಧದಿಂದ ಆಗಿರುವ ಲಾಭಗಳ ಕುರಿತು ಸಂವಾದ ನಡೆಸಿದರು.
ಕಾನೂನು ಕಳೆದ ವರ್ಷ ಜಾರಿಗೆ ಬಂದ ನಂತರ ತ್ರಿವಳಿ ತಲಾಖ್ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿದೆ ಎಂದು ಸಚಿವ ನಖ್ವಿ ಹೇಳಿದರೆ, ಇದು ಮುಸ್ಲಿಂ ಮಹಿಳೆಯರಿಗೆ ಮೋದಿ ಸರ್ಕಾರ ಕೊಟ್ಟ ಈದ್ ಮತ್ತು ರಾಖಿ ಗಿಫ್ಟ್ ಎಂದರು.
ತ್ರಿವಳಿ ತಲಾಖ್ ಬಗ್ಗೆ ಇಸ್ಲಾಂ ಧರ್ಮದಲ್ಲಿ ಪ್ರೋತ್ಸಾಹಿಸಿಲ್ಲ ಮತ್ತು ಅದು ಕಾನೂನುಬದ್ಧ ಕೂಡ ಆಗಿರಲಿಲ್ಲ, ಆದರೂ ಈ ಹಿಂದೆ ಕಾಂಗ್ರೆಸ್ ವೋಟ್ ಬ್ಯಾಂಕ್ ಲಾಭಕ್ಕಾಗಿ ಅದನ್ನು ತೆಗೆದುಹಾಕುವ ಮನಸ್ಸು ಮಾಡಲಿಲ್ಲ ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
ಕೇಂದ್ರ ಸರ್ಕಾರ ರಾಜಕೀಯ ಸಶಕ್ತೀಕರಣಕ್ಕೆ ಬದ್ಧವಾಗಿದೆ ಹೊರತು ರಾಜಕೀಯ ಶೋಷಣೆಗಲ್ಲ ಎಂದು ರವಿ ಶಂಕರ್ ಪ್ರಸಾದ್ ಹೇಳಿದರು.
Follow us on Social media