ತುಮಕೂರು : ಮುಂದಿನ ಮುಖ್ಯಮಂತ್ರಿ ನಾನೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
- ತುಮಕೂರಿನ ಗಾಜಿನ ಮನೆಯಲ್ಲಿ ನಡೆದ ಕುಂಚಿಟಿಗ ಒಕ್ಕಲಿಗ ಸಮಾವೇಶದಲ್ಲಿ ಮಾತನಾಡಿದ ಅವರು, 2023ರಲ್ಲಿ ನಾನೇ ಸಿಎಂ ಆಗುವುದಾಗಿ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದರು. ಅವರ ಆಸೆ ಈಡೇರಿಸಿಯೇ ಸಿದ್ದ. ಅದು ಹೇಗೆಯೇ ಆಗಬಹುದು. ನಾನು ಮುಂದಿನ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದರು.ಕೆಲವರು ಜೆಡಿಎಸ್ ಮುಗಿದೇ ಹೋಗಿದೆ ಎಂದು ಅಂದುಕೊಂಡಿದ್ದಾರೆ. ಅವರೇನೇ ಹೇಳಲಿ. ಜನಾಶೀರ್ವಾದಿಂದ ನಾನು ಮುಖ್ಯಮಂತ್ರಿ ಆಗುವೆನೆಂಬ ವಿಶ್ವಾಸವಿದೆ. ಆ ಮೂಲಕ ರಾಜ್ಯದ ಬಡವರ ಕಲ್ಯಾಣಕ್ಕಾಗಿ ಐದು ವರ್ಷ ಉತ್ತಮ ಆಡಳಿತ ನೀಡುತ್ತೇನೆ ಎಂದವರು ತಿಳಿಸಿದರು.