ಉದಯಪುರ : ತಂದೆಯನ್ನು ಹತ್ಯೆಗೈದ ಆರೋಪಿಗಳನ್ನು ಎನ್ಕೌಂಟರ್ ಮಾಡಬೇಕು ಇಲ್ಲವೇ ಗಲ್ಲಿಗೇರಿಸಬೇಕು ಎಂದು ಕನ್ಹಯ್ಯಾ ಲಾಲ್ ಪುತ್ರ ಒತ್ತಾಯಿಸಿದ್ದಾರೆ.
ಉದಯಪುರದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಕನ್ಹಯ್ಯ ಲಾಲ್ ಅವರ ಅಂತ್ಯಕ್ರಿಯೆ ನೇರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರ ಪುತ್ರ, ಹಂತಕರಲ್ಲಿ ಭಯ ಹುಟ್ಟಿಸಬೇಕಾದರೆ ಅವರನ್ನು ಎನ್ಕೌಂಟರ್ ಮಾಡುವುದು ಅಥವಾ ಗಲ್ಲಿಗೇರಿಸುವಂತಹ ಶಿಕ್ಷೆಯ ಅಗತ್ಯವಿದೆ. ಹೀಗಾಗಿ ಈ ಎರಡರ ಪೈಕಿ ಯಾವುದಾದರೊಂದು ಶಿಕ್ಷೆಯನ್ನು ನೀಡಬೇಕೆಂಬುದು ನಮ್ಮ ಒತ್ತಾಯ ಎಂದಿರುವುದಾಗಿ ಸುದ್ದಿಸಂಸ್ಥೆಯೊಂದು ಟ್ವೀಟ್ ಮಾಡಿದೆ.
ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಪ್ರಕಟಿಸಿದ್ದರೆಂಬ ಕಾರಣಕ್ಕೆ ದುಷ್ಕರ್ಮಿಗಳು ಮಂಗಳವಾರ ಟೈಲರ್ ಕನ್ಹಯ್ಯ ಲಾಲ್ ಅವರ ಕುತ್ತಿಗೆ ಸೀಳಿ ಹತ್ಯೆಗೈದಿದ್ದರು. ರಾಜಸ್ಥಾನದ ಉದಯಪುರದಲ್ಲಿ ನಡೆದ ಈ ಘಟನೆಯಿಂದಾಗಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.
Follow us on Social media