ದುಬೈ: ವೇಗಿಗಳಾದ ಯಾರ್ಕರ್ ಸ್ಪೇಷಲಿಸ್ಟ್ ಜಸ್ ಪ್ರೀತ್ ಬುಮ್ರಾ(17ಕ್ಕೆ 3) ಮತ್ತು ಟ್ರೆಂಟ್ ಬೌಲ್ಟ್(21ಕ್ಕೆ 3) ಬಿಗುವಿನ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್ 13ನೇ ಆವೃತ್ತಿಯ ಐಪಿಎಲ್ ನ 51ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ, ಅಗ್ರ ಸ್ಥಾನ ಬಲ ಪಡಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 9 ವಿಕೆಟ್ ಗೆ 110 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 14.2 ಓವರ್ ಗಳಲ್ಲಿ 1 ವಿಕೆಟ್ ಗೆ 111 ರನ್ ಸೇರಿಸಿ, ಟೂರ್ನಿಯಲ್ಲಿ ಒಂಬತ್ತನೇ ಜಯ ಸಾಧಿಸಿದ್ದು 18 ಅಂಕ ಕಲೆ ಹಾಕಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಪೃಥ್ವಿ ಶಾ 10, ಶ್ರೇಯಸ್ ಅಯ್ಯರ್ 25, ರಿಷಬ್ ಪಂತ್ 21, ಹೆಟ್ಮರ್ 11 ರನ್ ಬಾರಿಸಿದ್ದಾರೆ. ಮುಂಬೈ ಪರ ಬೌಲಿಂಗ್ ನಲ್ಲಿ ಟ್ರೆಂಟ್ ಬೌಲ್ಟ್, ಜಸ್ ಪ್ರೀತ್ ಬುಮ್ರಾ ತಲಾ 3 ವಿಕೆಟ್ ಪಡೆದಿದ್ದಾರೆ.
ಮುಂಬೈ ಪರ ಕ್ವಿಂಟನ್ ಡಿ ಕಾಕ್ 26, ಇಶಾನ್ ಕಿಶನ್ ಅಜೇಯ 72 ಮತ್ತು ಸೂರ್ಯಕುಮಾರ್ ಯಾದವ್ ಅಜೇಯ 12 ರನ್ ಪೇರಿಸಿದ್ದಾರೆ.
Follow us on Social media