ಮಂಗಳೂರು: ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಮತ್ತೊಬ್ಬ ಅಧಿಕಾರಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಮತ್ತೆ ಬದಲಾವಣೆ ಮಾಡಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಗುಪ್ತಚರ ಇಲಾಖೆ ಡಿಜಿಪಿಯಾಗಿ ಆಗಮಿಸಿದ್ದ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅವರು ಮಂಗಳೂರು ಕಮಿಷನರ್ ಆಗಿ ನೇಮಕಗೊಳಿಸಲಾಗಿತ್ತಾದರೂ, ಅವರು ಬರಲು ಮನಸ್ಸು ಮಾಡಿಲ್ಲ. ಹಾಗಾಗಿ ಖಾಲಿ ಇರುವ ಮಂಗಳೂರು ಆಯುಕ್ತರ ಹುದ್ದೆಗೆ ಡಾ.ಪಿ.ಎಸ್.ಹರ್ಷ ಅವರನ್ನು ನೇಮಕ ಮಾಡಲಾಗಿದೆ.
ಹರ್ಷ ಕೂಡ ಈ ಮೊದಲು ಪುತ್ತೂರು ಎಎಸ್ಪಿ ಆಗಿದ್ದವರು. ಜಿಲ್ಲೆಯ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿರುವವರು. ಇದರ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ನಿರ್ದೇಶಕರಾಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಯುಕ್ತ ರಾಗಿ, ಕಾರಾಗೃಹ ಇಲಾಖೆ ಡಿಐಜಿ, ಕೆಎಸ್ಸಾರ್ಟಿಸಿ ನಿರ್ದೇಶಕ(ವಿಜಿಲೆನ್ಸ್ ಮತ್ತು ಸೆಕ್ಯೂರಿಟಿ) ಮುಂತಾದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಉಪಾಯುಕ್ತ ಅರುಣಾಂಶುಗಿರಿ
ಖಾಲಿ ಇರುವ ಮಂಗಳೂರು ಉಪ ಆಯುಕ್ತರ(ಕಾನೂನು ಸುವ್ಯವಸ್ಥೆ) ಹುದ್ದೆಗೆ ಡಾ.ಅರುಣಾಂಶು ಗಿರಿ ಎಂಬುವರನ್ನು ನೇಮಕ ಮಾಡಲಾಗಿದೆ. ಇವರು ಈ ಮೊದಲು ಕಾರ್ಕಳ ನಕ್ಸಲ್ ನಿಗ್ರಹ ದಳದಲ್ಲಿ ಎಸ್ಪಿ ಆಗಿದ್ದರು. ಆಯುಕ್ತ, ಉಪಾಯುಕ್ತ ಇಬ್ಬರೂ ಶೀಘ್ರ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆ.